- Advertisement -
- Advertisement -
ಬೆಂಗಳೂರು: ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಬೇಕೆಂಬ ಆಸೆ ಹಲವು ಮಹಿಳೆಯರಿಗಿದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಶಾಂಪುಗಳನ್ನು ಬಳಸಿ ಕೂದಲನ್ನು ಹಾಳುಮಾಡಿಕೊಳ್ಳುವ ಬದಲು ಮನೆಯಲ್ಲಿಯೇ ಶಾಂಪು ತಯಾರಿಸಿ ಬಳಸಿ.
ಅಲೋವೆರಾ ½ ಕಪ್, ಗ್ರೀನ್ ಟೀ ¼ ಕಪ್ ತೆಗೆದುಕೊಳ್ಳಿ. ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ. ಬಳಿಕ 1ಕಪ್ ಗ್ರೀನ್ ಟೀಯನ್ನು ಅಲೋವೆರಾ ಜೆಲ್ ನೊಂದಿಗೆ ಮಿಶ್ರಣ ಮಾಡಿ. ಇದಕ್ಕೆ 3 ಚಮಚ ಶಾಂಪು ಸೇರಿಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ ಕಂಡೀಷನರ್ ಹಚ್ಚಿ.
ಗ್ರೀನ್ ಟೀ ಉತ್ಕರ್ಷಣ ನಿರೋಧಕವಾಗಿದ್ದು, ಅದು ಕೂದಲನ್ನು ಬಲಪಡಿಸುತ್ತದೆ. ಕೂದಲು ಉದುರುವುದನ್ನು ತಡೆಯುತ್ತದೆ. ಅಲೋವೆರಾ ಕೂದಲನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೋಷಿಸುತ್ತದೆ. ಕೂದಲಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ.
- Advertisement -