Monday, June 8, 2026
spot_imgspot_img
spot_imgspot_img

ಉಡುಪಿ: ಕೆಲಸಕ್ಕೆ ಹೋದ ಮಹಿಳೆ ಮಗಳೊಂದಿಗೆ ನಾಪತ್ತೆ!

- Advertisement -
- Advertisement -

ಉಡುಪಿ: ಪತಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ತನ್ನ ಮಗಳೊಂದಿಗೆ ನಾಪತ್ತೆಯಾದ ಘಟನೆ ಉಡುಪಿಯ ಕಾಪುವಿನಲ್ಲಿ ನಡೆದಿದೆ.

ಬಾಗಲಕೋಟೆ ಮೂಲದ ಪ್ರಸ್ತುತ ಕಾಪುವಿನಲ್ಲಿ ವಾಸವಿರುವ ಪರಶುರಾಮ ಎಣ್ಣೆ ಎಂಬವರ ಪತ್ನಿ 35ರ ಹರೆಯದ ಅನ್ನಪೂರ್ಣ ಮತ್ತು 7ರ ಹರೆಯದ ಪುತ್ರಿ ರೇಣುಕಾ ನಾಪತ್ತೆಯಾದವರು.

ಅನ್ನಪೂರ್ಣ ರವರು ಮಗಳೊಂದಿಗೆ ಏ.2ರಂದು ಬೆಳಗ್ಗೆ ಮನೆ ಬಿಟ್ಟು ಕೆಲಸಕ್ಕೆಂದು ಹೋಗಿದ್ದು, ಸಂಜೆವರೆಗೂ ಬಾರದೆ ಇರುವುದರಿಂದ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದ ಬಳಿಕ ಪತಿ ಪರಶುರಾಮ ರವರು ಕಾಪು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!