ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸರಣಿ ದರೋಡೆ ಯತ್ನ ನಡೆದಿದೆ. ದರೋಡೆ ಯತ್ನದ ಜೊತೆಗೆ ವಾಹನವನ್ನು ಸುಟ್ಟು ಹಾಕಿದ ಘಟನೆ ಉಡುಪಿಯ ಬೈಲೂರು ಹಾಗೂ ಮಾರ್ಪಳ್ಳಿಯಲ್ಲಿ ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ಬೈಲೂರು ವಾರ್ಡ್ ನ ದುರ್ಗಾ ನಗರದಲ್ಲಿ ಬೈಕ್, ರಿಕ್ಷಾ ಸುಟ್ಟು ಹಾಕಿ ದರೋಡೆ ಯತ್ನ ನಡೆಸಿದ್ದಾರೆ. ಒಂದು ಮನೆಯ ಗಾಜನ್ನು ಒಡೆದು, ಮತ್ತೊಂದು ಮನೆಯಲ್ಲಿ ಇನ್ವರ್ಟರ್ ವೈಯರ್ ಕಟ್ ಮಾಡಿ ದರೋಡೆ ಯತ್ನ ನಡೆಸಿದ್ದಾರೆ.
ತಡರಾತ್ರಿ 2ಗಂಟೆ ಸುಮಾರಿಗೆ ಕಳ್ಳರ ಕೈಚಳಕ ತೋರಿಸಿದ್ದಾರೆ.ಬೈಲೂರಿನಿಂದ ಒಂದು ಕಿಲೋಮೀಟರ್ ದೂರದಲ್ಲಿ ಮತ್ತೆ ಸರಣಿ ಕಳವು ನಡೆಸಿದ್ದಾರೆ. ಬೈಲೂರು ಭಾಗದಲ್ಲಿ ದರೋಡೆ ಯತ್ನ ನಡೆಸಿ ಮಾರ್ಪಳ್ಳಿಯಲ್ಲಿ ಸರಣಿ ಕಳವು ನಡೆಸಿದ್ದಾರೆ.
ರಿಕ್ಷಾದಲ್ಲಿದ್ದ 2ಸಾವಿರ ನಗದು, ದೈವಸ್ಥಾನದ ಕಾಣಿಕೆ ಹುಂಡಿ ಕಳವು ಯತ್ನ ನಡೆಸಿ ಮನೆಯೊಳಗೆ ನುಗ್ಗಿ ಚಿನ್ನವನ್ನು ಖದೀಮರು ಕಳವು ಮಾಡಿದ್ದಾರೆ. ಬೈಲೂರು ಮಾರ್ಪಳ್ಳಿಯಲ್ಲಿ ಆತಂಕದ ವಾತಾವರಣ ನಡೆದಿದೆ.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.