Wednesday, May 1, 2024
spot_imgspot_img
spot_imgspot_img

ನಾನು ಬೆಳೆದು ಬಂದ ಹಾದಿ ಇತರರಿಗೆ ಸ್ಫೂರ್ತಿ ನೀಡಲಿ; ರಂಜಿತ್ ರಾಮಚಂದ್ರನ್

- Advertisement -G L Acharya panikkar
- Advertisement -

ಕಾಸರಗೋಡು: ಪ್ರತಿಭೆ ಗುಡಿಸಲಿನಲ್ಲಿ ಅರಳುತ್ತಿದೆ ಎಂಬ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕಾಸರಗೋಡಿನ ಪಾಣತ್ತೂರು ಸಮೀಪದ ರಂಜಿತ್ ರಾಮಚಂದ್ರನ್.

ಜೋರಾಗಿ ಮಳೆ ಬಂದರೆ ಮಳೆ ನೀರು ಮಳೆಯ ಒಳಗಡೆ ಬೀಳುತ್ತಿತ್ತು. ಅದು ಹಂಚಿನ ಮನೆಯಾಗಿರಲಿಲ್ಲ. ಮನೆಯ ಮೇಲೆ ಪ್ಲಾಸ್ಟಿಕ್ ಶೀಟ್ ಗಳನ್ನು ಹಾಕಲಾಗಿತ್ತು. ಇದು ಮನೆಯ ಸ್ಥಿತಿ.

ಇಂತಹ ಮನೆಯಲ್ಲಿ ಬಡತನದಲ್ಲಿ ಮಧ್ಯೆ ಬೆಳೆದ ಪ್ರತಿಭಾಶಾಲಿ ಯುವಕ ರಂಜಿತ್ ರಾಮಚಂದ್ರನ್ ರಾಂಚಿಯ ಐಐಎಂ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನೇಮಕಗೊಂಡಿದ್ದಾರೆ.

ಕಾಲೇಜು ದಿನಗಳಲ್ಲಿ ರಾತ್ರಿ ನೈಟ್ ವಾಚ್ ಮನ್ ಆಗಿ ಕೆಲಸ ನಿರ್ವಹಿಸಿ, ಹಣ ಹೊಂದಿಸುತ್ತಿದ್ದರು. ಕೆಲಸ ದೊರೆತ ಸಂತಸವನ್ನು ಅವರು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ. ತಾವು ಬೆಳೆದು ಬಂದ ಹಾದಿ ಇತರರಿಗೆ ಸ್ಫೂರ್ತಿ ನೀಡಲಿ ಎಂದು ಹಾರೈಸಿದ್ದಾರೆ.

- Advertisement -

Related news

error: Content is protected !!