Friday, June 27, 2025
spot_imgspot_img
spot_imgspot_img

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಹಡಗೊಂದು ಬೋಟ್‌ಗೆ ಢಿಕ್ಕಿ; 3 ಸಾವು!

- Advertisement -
- Advertisement -

ಮಂಗಳೂರು: ನವಮಂಗಳೂರಿನಿಂದ ಸುಮಾರು 43 ನಾಟಿಕಲ್ ಮೈಲ್ ದೂರದ ಅರಬ್ಬೀ ಸಮುದ್ರದಲ್ಲಿ ಹಡಗೊಂದು ಬೋಟ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೋಟ್‌ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ayo

ಸೋಮವಾರ ತಡರಾತ್ರಿ ಸುರಿದ ಭಾರೀ ಗಾಳಿ-ಮಳೆಗೆ ಹಡಗೊಂದು ಬೋಟಿಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಬೋಟ್‌ನಲ್ಲಿ ಒಟ್ಟು 14 ಮಂದಿ ಮೀನುಗಾರಿದ್ದರು ಎಂದು ಹೇಳಲಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ ಮತ್ತು ಉಳಿದ 5 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ರಬ್ಹಾ ಎಂಬ ಹೆಸರಿನ ಬೋಟ್ ಹಡಗಿನ ಹೊಡೆತಕ್ಕೆ ಸಿಲುಕಿ ಹಾನಿಗೊಳಗಾಗಿವೆ. ಕರಾವಳಿ ಕಾವಲು ಪಡೆಯ ಅಧಿಕಾರಿ, ಸಿಬ್ಬಂದಿ ವರ್ಗವು ಕಾರ್ಯಾಚರಣೆಗೆ ಇಳಿದಿದೆ. ಮೃತಪಟ್ಟವರ ಸಹಿತ ಬೋಟ್‌ನಲ್ಲಿದ್ದವರು ಯಾರು, ಎಲ್ಲಿಯವರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೆ ಲಭಿಸಿಲ್ಲ. ಹೊರ ರಾಜ್ಯ ಮೂಲದವರು ಎಂದು ಹೇಳಲಾಗುತ್ತಿದೆ.

- Advertisement -

Related news

error: Content is protected !!