- Advertisement -
- Advertisement -



ಮಂಗಳೂರು : ಬೇಕರಿ ಆಹಾರ ಉತ್ಪನ್ನಗಳನ್ನು ರಿಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ನಗರದ ಬೇಕರಿಯೊಂದಕ್ಕೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೋಗ್ಯ ಸಚಿವ ಯುಟಿ ಖಾದರ್ ಅವರ ಸೂಚನೆಯ ಮೇರೆಗೆ ಸಿಹಿ ತಿಂಡಿ ತಿನಿಸು ತಯಾರಿಕಾ ಘಟಕ ಹಾಗೂ ಮಾರಾಟ ಮಾಡುವ ಆಹಾರೋದ್ಯಮಗಳ ಮೇಲೆ ಶನಿವಾರ (ಅ.17) ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಕುಮಾರ್ ಸಿಎಚ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ನಗರದ ಫಳೀರ್ ಜಂಕ್ಷನ್ನಲ್ಲಿರುವ ಬೇಕರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಆಹಾರದ ಪ್ಯಾಕೆಟ್ಗಳ ಮೇಲೆ ತಯಾರಿಕಾ ದಿನಾಂಕ, ಬಳಕೆಯ ಅವಧಿ ಮೀರುವ ದಿನಾಂಕ, ಬ್ಯಾಚ್ ನಂಬರ್, ಎಫ್ಎಸ್ಎಸ್ಎಐ ಲೈಸೆನ್ಸ್ ನಂಬರ್ ಇಲ್ಲದ ಆಹಾರ ಉತ್ಪನ್ನಗಳನ್ನು ಸೀಜ್ ಮಾಡಿ ಸೀಲ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
- Advertisement -








