Saturday, June 28, 2025
spot_imgspot_img
spot_imgspot_img

ವಿಟ್ಲ: ಪಟ್ಟಣ ಪಂಚಾಯಿತಿನ ಅಧ್ಯಕ್ಷೆಯಾಗಿ ಚಂದ್ರಕಾಂತಿ ಶೆಟ್ಟಿ ಅಧಿಕಾರ ಸ್ವೀಕಾರ

- Advertisement -
- Advertisement -

ವಿಟ್ಲ: ಪಟ್ಟಣ ಪಂಚಾಯಿತಿನ ಎರಡನೇ ಅವಧಿಯ ಉಳಿದ ತಿಂಗಳುಗಳಿಗೆ ನೂತನ ಅಧ್ಯಕ್ಷೆಯಾಗಿ ಚಂದ್ರಕಾಂತಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಟ್ಲ ಪಟ್ಟಣ ಪಂಚಾಯಿತಿನಲ್ಲಿ ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ದಮಯಂತಿ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಕೈಗೊಂಡಿದ್ದರಿಂದ ದಮಯಂತಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ಚುನಾವಣೆ ನಡೆಸಿದ್ದು, ಬಿಜೆಪಿ ಸದಸ್ಯೆ ಚಂದ್ರಕಾಂತಿ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಂದ್ರಕಾಂತಿ ಶೆಟ್ಟಿ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮ ಪಂಚಾಯತ್‌ನಲ್ಲಿ ನಡೆಯಿತು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಷಾಕೃಷ್ಣಪ್ಪ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಸದಸ್ಯರಾದ ಅರುಣ್ ವಿಟ್ಲ, ರಾಮ್ ದಾಸ್ ಶೆಣೈ, ರವಿಪ್ರಕಾಶ್, ಶ್ರೀಕೃಷ್ಣ, ಲೋಕನಾಥ ಶೆಟ್ಟಿ, ಜಯಂತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!