Friday, April 26, 2024
spot_imgspot_img
spot_imgspot_img

ಮರಣದ ಭಯ ಜಾಗೃತಗೊಳ್ಳಲಿ,ಕೆಡುಕಿನ ಕಡೆ ಸುಳಿಯಲು ಅವಕಾಶವೇ ಸಿಗದು: ಇಬ್ರಾಹಿಂ ಸಅದಿ ಮಾಣಿ

- Advertisement -G L Acharya panikkar
- Advertisement -

ಮಾಣಿ : ಆಧ್ಯಾತ್ಮಿಕ ಮಜ್ಲಿಸ್‌ಗಳು ಸರ್ವ ಸಮಸ್ಯೆಗಳಿಗೂ ಪರಿಹಾರವಾಗಿದೆ,ಪೂರ್ವಿಕರು ಅಲ್ಲಾಹನ ಸ್ಮರಣೆ ಹಾಗೂ ಆಧ್ಯಾತ್ಮಿಕತೆಯ ಮೂಲಕ ಸಂಕಷ್ಟಗಳನ್ನು ಎದುರಿಸುತ್ತಿದ್ದರು,ಮರಣದ ಭಯದೊಂದಿಗೆ ಜೀವಿಸಿದರೆ ಕೆಡುಕಿನತ್ತ ಸುಳಿಯಲು ಅವಕಾಶವೇ ಸಿಗದು ಎಂದು ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷ ಇಬ್ರಾಹಿಂ ಸಅದಿ ಮಾಣಿ ಹೇಳಿದರು.

ಅವರು ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ಹಾಗೂ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಮಾಣಿ ಪಟ್ಲಕೋಡಿ ಅಬ್ಬಾಸ್‌ರವರ ನಿವಾಸದಲ್ಲಿ ನಡೆದ ಅಲ್ ಮಹ್‌‌ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮುಖ್ಯ ಭಾಷಣ ಮಾಡಿದರು ಎಸ್‌ವೈಎಸ್ ಮಾಣಿ ಸೆಂಟರ್ ನಾಯಕರಾದ ಹೈದರ್ ಸಖಾಫಿ ಗಡಿಯಾರ್ ರವರು ದುಆ ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸೆಂಟರ್ ನಾಯಕರಾದ ಹಬೀಬ್ ಶೇರಾ,ಸುಲೈಮಾನ್ ಸೂರಿಕುಮೇರು,ಜಲೀಲ್ ಸಖಾಫಿ ಬರಿಮಾರ್,ಅಶ್ರಫ್ ಪಾರ್ಪಕಜೆ,ಜಲೀಲ್ ಮುಸ್ಲಿಯಾರ್ ಬುಡೋಳಿ,ಯೂಸುಫ್ ಹಾಜಿ,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಮುಂತಾದವರು ಉಪಸ್ಥಿತರಿದ್ದರು,ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿದರು,ಇಸಾಕ್ ಮಾಣಿ ಬೈತ್ ಹಾಡಿದರು,ಕೊನೆಯಲ್ಲಿ ದಾರುಲ್ ಇರ್ಶಾದ್ ಮುದರ್ರಿಸ್ ಯಾಕೂಬ್ ಸಅದಿ ಬೆಟ್ಟಂಪಾಡಿ ದುಆ ನಡೆಸಿಕೊಟ್ಟರು,ಮುಬಶ್ಶಿರ್ ಸೂರಿಕುಮೇರು ಧನ್ಯವಾದಗೈದರು.

- Advertisement -

Related news

error: Content is protected !!