Friday, June 26, 2026
spot_imgspot_img
spot_imgspot_img

ರಾಸಾಯನಿಕ ಕಾರ್ಖಾನೆಯಲ್ಲಿ ವಿಷಯುಕ್ತ ಅನಿಲ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತ್ಯು!

- Advertisement -
- Advertisement -

ನೆಲ್ಲೂರು: ರಾಸಾಯನಿಕ ಕಾರ್ಖಾನೆಯಲ್ಲಿ ವಿಷಯುಕ್ತ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇಬ್ಬರು ಅನಾರೋಗ್ಯಕ್ಕೀಡಾಗಿರುವ ಘಟನೆ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ನೆಲ್ಲೂರಿನ ವಂಜಮೂರಿನ ವೆಂಕಟನಾರಾಯಣ ರಸಾಯನಿಕ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿಗೆ ತಲುಪಿದ ವರದಿಗಳ ಪ್ರಕಾರ, ಮೃತರನ್ನು ವಿ. ಜಾಮೂರ್‌ನ ಶರೀಫ್, ಪಿ.ಸ್ರೀನು ಮತ್ತು ಚೌತಾ ಭೀಮವರಂನ ತಿರುಪಟಯ್ಯ ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಕಾರ್ಖಾನೆಯು ಕಾರ್ಮಿಕರನ್ನು ನೆಲ್ಲೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅವರಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!