Friday, June 26, 2026
spot_imgspot_img
spot_imgspot_img

ದುಷ್ಕರ್ಮಿಗಳಿಂದ ಟಿಎಂಸಿ ಮುಖಂಡನಿಗೆ ಗುಂಡಿಟ್ಟು ಹತ್ಯೆ!

- Advertisement -
- Advertisement -

ಚಿನ್ಸುರಾಹ್: ಟಿಎಂಸಿ ಮುಖಂಡ ಆದಿತ್ಯ ನಿಯೋಗಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ..

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಆದಿತ್ಯ ನಿಯೋಗಿ ಹಣ್ಣು ತರಕಾರಿ ಖರೀದಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಗಂಭೀರ ಸ್ಥಿತಿಯಲ್ಲಿದ್ದ ಬಾನ್ಸ್‌ಬೆರಿಯಾ ಮುನ್ಸಿಪಾಲಿಟಿಯ ಮಾಜಿ ಉಪಾಧ್ಯಕ್ಷ ಆದಿತ್ಯ ನಿಯೋಗಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಅವರನ್ನು ಕೋಲ್ಕತ್ತ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು.

ಆಡಳಿತ ಪಕ್ಷದೊಳಗಿನ ಗುಂಪುಗಾರಿಕೆ ದ್ವೇಷ ಎಂದು ಬಿಜೆಪಿ ಹೇಳಿದೆ. ಬಿಜೆಪಿ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಟಿಎಂಸಿ ಶಾಸಕ ತಪನ್ ದಾಸ್ ಗುಪ್ತ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

- Advertisement -

Related news

error: Content is protected !!