Tuesday, September 1, 2026
spot_imgspot_img
spot_imgspot_img

ಸಪ್ನಾ ಬುಕ್‍ಹೌಸ್ ಸಂಸ್ಥಾಪಕ ಸುರೇಶ್ ಶಾ ವಿಧಿವಶ!

- Advertisement -
- Advertisement -

ಬೆಂಗಳೂರು: ಸಪ್ನಾ ಬುಕ್‍ಹೌಸ್ ಸಂಸ್ಥಾಪಕ ಸುರೇಶ್ ಶಾ(84) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ವಯೋ ಸಹಜ ಖಾಯಿಲೆಯಿಂದ ನರಳುತ್ತಿದ್ದ ಅವರು, ಶೇಷಾದ್ರಿಪುರದ ಸಾಗರ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಅವರು ಪುತ್ರರಾದ ನಿತಿನ್ ಶಾ, ದೀಪಕ್ ಶಾ, ಪರೇಶ್ ಶಾ ಹಾಗೂ ಬಂಧುಮಿತ್ರರು, ಪುಸ್ತಕ ಪ್ರೇಮಿಗಳನ್ನು ಅಗಲಿದ್ದಾರೆ.

ಬೆಂಗಳೂರು ನಗರದಲ್ಲಿ 1966ರಲ್ಲಿ ಸಪ್ನಾ ಬುಕ್‍ಹೌಸ್ ಹೆಸರಿನಲ್ಲಿ ಸಣ್ಣದಾಗಿ ಪುಸ್ತಕ ಮಳಿಗೆಯೊಂದನ್ನು ಆರಂಭಿಸಿದ ಅವರು, ತಮ್ಮ ಅವಿರತ ಪರಿಶ್ರಮದಿಂದಾಗಿ ದೇಶದಲ್ಲೇ ದೊಡ್ಡ ಪುಸ್ತಕ ಮಳಿಗೆಯನ್ನಾಗಿ ಕಟ್ಟಿ ಬೆಳೆಸಿದರು.

ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಸಪ್ನಾ ಬುಕ್‍ಹೌಸ್‍ನ 19 ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಬುಧವಾರ ಬೆಳಗ್ಗೆ ನಗರದ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಪ್ನಾ ಬುಕ್‍ಹೌಸ್ ಪ್ರಕಟನೆಯಲ್ಲಿ ತಿಳಿಸಿದೆ.

driving
- Advertisement -

Related news

error: Content is protected !!