Friday, June 26, 2026
spot_imgspot_img
spot_imgspot_img

ತಮಿಳು ನಟಿಯನ್ನು ಮೂರು ಬಾರಿ ಗರ್ಭಪಾತ ಮಾಡಿಸಿದ ಸಚಿವ; ರೇಪ್ ಕೇಸ್ ದಾಖಲು!

- Advertisement -
- Advertisement -

ಚೆನ್ನೈ: ತಮಿಳು ಚಿತ್ರನಟಿ ನೀಡಿದ ಅತ್ಯಾಚಾರ ದೂರಿನ ಆರೋಪದ ಮೇಲೆ ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕ0ದನ್ ವಿರುದ್ಧ ದೂರು ದಾಖಲಾಗಿದೆ. ಮಾಜಿ ಸಚಿವ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನನ್ನು ಮೋಸ ಮಾಡಿರುವುದಾಗಿ ನಟಿ ದೂರಿನಲ್ಲಿ ಆರೋಪಿಸಿದ್ದಾರೆ.

ಅತ್ಯಾಚಾರದ ಹೊರತಾಗಿ ಮಾಜಿ ಸಚಿವ ಮಣಿಕಂದನ್ ವಿರುದ್ಧ ಚೆನ್ನೈನ ಅಡ್ಯಾರ್ ಆಲ್ ವುಮೆನ್ ಪೊಲೀಸರು ಐಪಿಸಿ ಕಾಯ್ದೆಯಡಿ ಕ್ರಿಮಿನಲ್ ಬೆದರಿಕೆ, ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿರುವ ಬಗ್ಗೆ ಎಫ್‌ಐಅರ್ ದಾಖಲಾಗಿದೆ.

driving

ಮಾಜಿ ಸಚಿವ ಮಣಿಕಂದನ್ ಕಳೆದ ಐದು ವರ್ಷಗಳಿಂದ ತನ್ನ ಜತೆ ಸಂಬ0ಧ ಹೊಂದಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದಾರೆ. ತಾನು ಗರ್ಭಿಣಿಯಾದಾಗ ಬಲವಂತದಿ0ದ ಗರ್ಭಪಾತ ಮಾಡಿಸಿರುವುದಾಗಿಯೂ ದೂರಿನಲ್ಲಿ ಆರೋಪಿಸಲಾಗಿದೆ.

ತಮ್ಮಿಬ್ಬರ ಸಂಬ0ಧದ ನಡುವೆ ಮೂರು ಬಾರಿ ಗರ್ಭಪಾತ ಮಾಡಿಸಿದ್ದು, ಮಾಜಿ ಸಚಿವ ಪ್ರತಿ ಬಾರಿಯೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದು, ಮದುವೆಯಾದ ಮೇಲೆ ಮಗುವಿಗೆ ಜನನ ನೀಡಲಿ ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಂದು ವೇಳೆ ದೇಶವನ್ನು ಬಿಟ್ಟು ಹೋಗದಿದ್ದರೆ ತನ್ನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಮಣಿಕಂದನ್ ಬೆದರಿಕೆ ಒಡ್ಡಿದ್ದಲ್ಲದೇ, ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

- Advertisement -

Related news

error: Content is protected !!