Tuesday, July 28, 2026
spot_imgspot_img
spot_imgspot_img

ವಿಟ್ಲ: ವೀರಕಂಬ ಪಂಚಾಯತಿನ ವತಿಯಿಂದ ಕೂಲಿ ಕಾರ್ಮಿಕರ, ಸುತ್ತಮುತ್ತಲಿನ ಮನೆಯವರ ಕೊವಿಡ್ ತಪಾಸಣೆ!

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಬಪ್ಪಹಿತ್ತಿಲು ಮೈರ ಎಂಬಲ್ಲಿನ ಕೋರೆಯ 60 ಜನ ಕೂಲಿ ಕಾರ್ಮಿಕರನ್ನು ಹಾಗೂ ಸುತ್ತಮುತ್ತಲಿನ ಮನೆಯವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವೀರಕಂಬ ಪಂಚಾಯತಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಹಕಾರದೊಂದಿಗೆ ಆರೋಗ್ಯ ತಪಾಸಣೆ ಮತ್ತು ಕೊವಿಡ್ ತಪಾಸಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಗ್ರಾಮ ನೈರ್ಮಲ್ಯ ಸಮಿತಿ ಅಧ್ಯಕ್ಷ ಶ್ರೀಮತಿ ಮೀನಾಕ್ಷಿ ಸುನಿಲ್, ಗ್ರಾಮಕರಣಿಕ ಕರಿಬಸಪ್ಪ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಆರ್. ಬಿ. ಎಸ್. ಕೆ .ವೈದ್ಯಾಧಿಕಾರಿ ಡಾಕ್ಟರ್ ನಿಶ್ಮಿತಾ, ಆರೋಗ್ಯ ನಿರೀಕ್ಷಣ ಅಧಿಕಾರಿ ಶ್ರೀಮತಿ ಕುಸುಮ, ವೀರಕಂಭ ಗ್ರಾಮ ವ್ಯಾಪ್ತಿಯ ಆರೋಗ್ಯ ಸಹಾಯಕಿ ಶ್ರೀಮತಿ ಜ್ಯೋತಿ ಕೆ ,ಆಶಾ ಕಾರ್ಯಕರ್ತೆ ಶ್ರೀಮತಿ ಲೀಲಾವತಿ, ಅಂಗನವಾಡಿ ಟೀಚರ್ ಶ್ರೀಮತಿ ಸುಮತಿ, ಹಾಗೂ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!