Friday, June 26, 2026
spot_imgspot_img
spot_imgspot_img

ಅಣ್ಣ ಅತ್ತಿಗೆಯ ಕೊಲೆಗೈದ ಪಾಪಿ ತಮ್ಮ!

- Advertisement -
- Advertisement -

ಮಂಡ್ಯ: ಅಣ್ಣ-ತಮ್ಮನ ಜಗಳ ವಿಕೋಪಕ್ಕೆ ತಿರುಗಿದ್ದು, ಜಗಳ ಬಿಡಿಸಲು ಬಂದ ಅತ್ತಿಗೆಗೂ ಚಾಕುವಿನಿಂದ ಇರಿದ ತಮ್ಮ, ಅಣ್ಣನನ್ನು ಕೊಂದಿರುವ ದುರಂತ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಬಾಲಕೃಷ್ಣ ಹಾಗೂ ಸುರೇಶ್​ ಇಬ್ಬರೂ ಸಹೋದರರು. ಮೈಸೂರಿನಲ್ಲಿ ವಾಸ ಮಾಡುತ್ತಿದ್ದ ಬಾಲಕೃಷ್ಣ ಲಾಕ್​ಡೌನ್ ಹಿನ್ನೆಲೆ ಊರಿಗೆ ಬಂದಿದ್ದರು.

ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಅಣ್ಣ ಬಾಲಕೃಷ್ಣ ಮತ್ತು ತಮ್ಮ ಸುರೇಶ್​ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಇವರಿಬ್ಬರ ನಡುವೆ ಜಮೀನು ವಿಚಾರವಾಗಿ ಸೋಮವಾರ ಜಗಳ ನಡೆದಿದ್ದು, ದಾಯಾದಿ ಕಾಳಗ ವಿಕೋಪಕ್ಕೆ ತಿರುಗಿದ್ದು, ಜಗಳ ಬಿಡಿಸಲು ಹೋದ ಬಾಲಕೃಷ್ಣನ ಪತ್ನಿ ಸರಳಾಗೆ ಮೈದುನ ಸುರೇಶ್ ಚಾಕು ಹಾಕಿದ್ದಾನೆ. ಬಳಿಕ ಅಣ್ಣ ಬಾಲಕೃಷ್ಣ(54)ನನ್ನು ಕೊಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಸರಳಾರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!