ಮಂಗಳೂರು: ಎಬಿವಿಪಿ ಕರ್ನಾಟಕ ವತಿಯಿಂದ ಜೂನ್ 5 ವಿಶ್ವ ಪರಿಸರ ದಿನದಂದು ಪ್ರಾರಂಭವಾದ ಕಾರ್ಯಕ್ರಮ , ಆಕ್ಸಿಜೆನ್ ಚಾಲೆಂಜ್ ಹೆಸರಿನಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ 972 ಸ್ಥಳಗಳಲ್ಲಿ 45000 ಕಾರ್ಯಕರ್ತರು 50900 ಗಿಡಗಳನ್ನು ನೆಟ್ಟಿದ್ದಾರೆ.

ಒಬ್ಬರು 5 ಗಿಡಗಳಂತೆ, 5 ಲಕ್ಷ ಗಿಡಗಳನ್ನು 5 ದಿನಗಳಲ್ಲಿ ನೆಡಬೇಕು ಹಾಗೂ ಒಂದು ವರ್ಷ ಸಂಪೋಷಣೆ ಮಾಡಬೇಕೆನ್ನುವ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.


ಈ ಕಾರ್ಯಕ್ರಮದಲ್ಲಿ ಐಎಎಸ್ ಆಫೀಸರ್ ಗಳು ,ಪೊಲೀಸ್ ಅಧಿಕಾರಿಗಳು ,ಪೂಜ್ಯ ಸ್ವಾಮೀಜಿಗಳು, ವಿವಿ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಅನೇಕ ಗಣ್ಯ ವ್ಯಕ್ತಿಗಳು, ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಅಭಿಯಾನಕ್ಕೆ ಸಹಕರಿಸಿದ್ದಾರೆ.


ಮುಂದಿನ 5 ದಿನಗಳಲ್ಲಿ 5 ಲಕ್ಷ ಗುರಿಯನ್ನು ತಲುಪುವ ಹಿನ್ನೆಲೆಯಲ್ಲಿ, ಸಾರ್ವಜನಿಕರು, ವಿದ್ಯಾರ್ಥಿಗಳು, ಈ ಅಭಿಯಾನದಲ್ಲಿ ಪಾಲ್ಗೋಳ್ಳುವ ಮೂಲಕ ಪ್ರಕೃತಿ ಮಾತೆಯ ಈ ಅರ್ಥಪೂರ್ಣ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


