- Advertisement -
- Advertisement -
ಇಸ್ರೇಲ್: ಇಸ್ರೇಲ್ ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ.

ಬೆಂಜಮಿನ್ ನೆತನ್ಯಾಹು ಬರೋಬ್ಬರಿ 12 ವರ್ಷಗಳ ನಂತರ ಪ್ರಧಾನಿ ಪಟ್ಟದಿಂದ ಕೆಳಕ್ಕಿಳಿದಿದ್ದಾರೆ. ಅವರನ್ನು ಖುರ್ಚಿಯಿಂದ ಇಳಿಸಲು ಅವರದೇ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಈ ಮುನ್ನ ಒಟ್ಟುಗೂಡಿದ್ದರು.

ಬೆಂಜಮಿನ್ ನೆತನ್ಯಾಹು ಸರ್ಕಾರದ ಭಾಗವೇ ಆಗಿದ್ದ ನಫ್ತಾಲಿ ಬೆನೆಟ್ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು 2009ರಿಂದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ.

ಹೊಸದಾಗಿ ರೂಪಿಸಿರುವ ಸಮಿಶ್ರ ಸರ್ಕಾರಕ್ಕೆ ಸಂಸತ್ ಸದಸ್ಯರ ಅಂಗೀಕಾರ ದಕ್ಕಿದ್ದು, ಮಿಲೇನಿಯರ್, ಮಾಜಿ ಟೆಕ್ ಉದ್ಯಮಿ ನಫ್ತಾಲಿ ಬೆನೆಟ್ ಇಸ್ರೇಲ್ನ ಪ್ರಧಾನಿಯಾಗಿದ್ದಾರೆ.


- Advertisement -