Thursday, June 4, 2026
spot_imgspot_img
spot_imgspot_img

ಟೆಕ್ಸಾಸ್‌ನ ಶಾಪಿಂಗ್ ಮಾಲ್‌ನಲ್ಲಿ ಗುಂಡಿನ ದಾಳಿ; ಭಾರತೀಯ ಮೂಲದ ಯುವತಿ ಬಲಿ

- Advertisement -
- Advertisement -

ಅಮೆರಿಕದ ಟೆಕ್ಸಾಸ್‌ನ ಶಾಪಿಂಗ್ ಮಾಲ್‌ನಲ್ಲಿ ಶನಿವಾರ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ 9ಮಂದಿ ಮೃತ ಪಟ್ಟಿದ್ದಾರೆ. ಅದರಲ್ಲಿ ಒಬ್ಬರು ಭಾರತೀಯ ಮಹಿಳೆ ಆಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಪುತ್ರಿ ಐಶ್ವರ್ಯಾ (27) ಶೂಟೌಟ್‌‌ನಲ್ಲಿ ಮೃತಪಟ್ಟಿದ್ದು, ಹೈದರಾಬಾದ್ ನ ಸರೂರು ನಗರದ ದಾಟಿಕೊಂಡ ನಿವಾಸಿಯಾಗಿರುವ ಮೃತ ಐಶ್ವರ್ಯಾ ಟೆಕ್ಸಾಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು.

ಟೆಕ್ಸಾಸ್ ನ ಖಾಸಗಿ ಸಂಸ್ಥೆಯಲ್ಲಿ ಪ್ರೊಜೆಕ್ಟ್ ಇಂಜಿನಿಯರ್ ಆಗಿ ಐಶ್ವರ್ಯ ಕೆಲಸ ಮಾಡುತ್ತಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಗುಂಡಿನ ದಾಳಿ ನಡೆಯುವುದಕ್ಕೆ ಕೆಲ ನಿಮಿಷಗಳ ಮುನ್ನ ಐಶ್ವರ್ಯ ಭಾರತದಲ್ಲಿರುವ ತನ್ನ ಹೆತ್ತವರೊಂದಿಗೆ ಫೋನ್ ನಲ್ಲಿ ಮಾತಾಡಿದ್ದರು. ಗುಂಡಿನ ದಾಳಿಯ ಮಾಹಿತಿ ತಿಳಿದ ಹೆತ್ತವರು ಮತ್ತೆ ಮಗಳಿಗೆ ಫೋನ್ ಕರೆ ಮಾಡಿದಾಗ ಉತ್ತರಿಸಿಲ್ಲ ಎಂದು ವರದಿ ಹೇಳಿದೆ.

- Advertisement -

Related news

error: Content is protected !!