Tuesday, October 13, 2026
spot_imgspot_img
spot_imgspot_img

ಸುಳ್ಯದ ಯುವಕ ಪ್ರಮೋದ್ ಡೆಂಗ್ಯೂ ಗೆ ಬಲಿ

- Advertisement -
- Advertisement -

ಸುಳ್ಯ: ಡೆಂಗ್ಯೂ ಜ್ವರದಿಂದ ಯುವಕನೋರ್ವ ಮೃತಪಟ್ಟಿದ್ದಾನೆ. ಸುಳ್ಯದ ಶಾಂತಿ ನಗರ ನಿವಾಸಿ, ಮೆಸ್ಕಾಂ ಸಿಬ್ಬಂದಿ ನಾಗೇಶ ಎಂಬವರ ಪುತ್ರ ಪ್ರಮೋದ್ (21) ಮೃತ ಯುವಕ.

ಕಳೆದ ಹತ್ತು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಮೋದ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಮೋದ್ ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

- Advertisement -

Related news

error: Content is protected !!