Sunday, June 14, 2026
spot_imgspot_img
spot_imgspot_img

ಮಂಗಳೂರು : ರಸ್ತೆ ಅಪಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ..!

- Advertisement -
- Advertisement -

ಮಂಗಳೂರು : ಮಂಗಳೂರಿನ ಮಾರಿಪಳ್ಳ ಎಂಬಲ್ಲಿ ನಡೆದ ಬೈಕ್‌ ಮತ್ತು ಟಿಪ್ಪರ್ ರಸ್ತೆ ಅಪಘಾತದಲ್ಲಿ ಆಲೆಟ್ಟಿ ಗ್ರಾಮದ ಯುವಕ ಸಾವನ್ನಪ್ಪಿದ್ದಾರೆ.

ಆಲೆಟ್ಟಿ ಗ್ರಾಮದ ನೆಡ್ಚಿಲು ವಾಸುದೇವ ಗೌಡ ಎಂಬವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಚಿಲು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮೃತ ಸೇವಂತ್ ಪುತ್ತೂರಿನಿಂದ ಮಂಗಳೂರು ಕಡೆಗೆ ಗೆಳೆಯರೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಮಾರಿಪಳ್ಳ ಎಂಬಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ರಸ್ತೆಗೆಸೆಯಲ್ಪಟ್ಟ ಸೇವಂತ್ ಗಂಭೀರವಾಗಿ ಗಾಯಗೊಂಡಿದ್ದರು.

ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ತಲೆಗೆ ವಿಪರೀತ ಪೆಟ್ಟಾಗಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

- Advertisement -

Related news

error: Content is protected !!