- Advertisement -
- Advertisement -
ಕಾಪು: ಮರ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಇಂದು ಮುಂಜಾನೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಮೀಪದಲ್ಲಿ ನಡೆದಿದೆ. ಭಾರೀ ಗಾಳಿ ಮಳೆಯಿಂದಾಗಿ ರಸ್ತೆಗೆ ಮರ ಬಿದ್ದು, ಕಾಪು – ಶಿರ್ವ ನಡುವಿನ ಸಂಚಾರಕ್ಕೆ ತಡೆಯುಂಟಾಗಿದೆ.

ಕಾಪು – ಶಿರ್ವ ರಸ್ತೆಯ ಮಜೂರು, ಮಲ್ಲಾರು, ಚಂದ್ರನಗರ, ಬೆಳಪು, ಕಳತ್ತೂರು ಕಡೆಯಿಂದ ಕಾಪುವಿಗೆ ಬರುವ ಜನರಿಗೆ ಭಾರೀ ತೊಂದರೆಯಾಗಿದ್ದು, ಮರಬಿದ್ದು ಸಂಚಾರಕ್ಕೆ ತಡೆಯುಂಟಾಗಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಮಾಜ ಸೇವಕ ಪ್ರಶಾಂತ್ ಪೂಜಾರಿ ಕೊಂಬಗುಡ್ಡೆ, ಉಮೇಶ್ ಶೆಟ್ಟಿ, ನಾಗೇಶ್ ಭಂಡಾರಿ ಸಹಿತ ಸ್ಥಳೀಯರು ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿ ಕೊಡಲು ಶ್ರಮಿಸುತ್ತಿದ್ದಾರೆ. ಅರಣ್ಯ ರಕ್ಷಕ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಪು ಪೊಲೀಸರು ಸಂಚಾರ ನಿಯಂತ್ರಣಕ್ಕೆ ಸಹಕರಿಸುತ್ತಿದ್ದಾರೆ.



- Advertisement -








