- Advertisement -
- Advertisement -
ಮಂಗಳೂರು: ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಲ್ಕಿಯ ಐಕಳ ಬಳಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿಯನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ. ಗಾಳಿ-ಮಳೆಯ ಪರಿಣಾಮ ಹಾನಿಗೀಡಾಗಿದ್ದ ಮನೆಯ ಹಂಚನ್ನು ಸರಿಪಡಿಸಲು ಜನಾರ್ಧನ ಆಚಾರ್ಯ ಏಣಿ ಇಟ್ಟು ಮೇಲೇರುತ್ತಿದ್ದ ಸಂದರ್ಭ ಆಯತಪ್ಪಿ ಏಣಿ ವಿದ್ಯುತ್ ತಂತಿಗೆ ತಾಗಿ ಶಾಕ್ ಆಗಿದೆ.

ಈ ವೇಳೆ ಮಾಧವ ಆಚಾರ್ಯ ಅವರು ತಂತಿಗೆ ಏಣಿ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಏಣಿಯನ್ನು ಹಿಡಿದಿದ್ದು, ವಿದ್ಯುತ್ ಶಾಕ್ ಆಗಿ ಪ್ರಜ್ಞೆ ತಪ್ಪಿದ್ದಾರೆ. ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


- Advertisement -








