- Advertisement -
- Advertisement -
ಕೋಲಾರ: ಶ್ರೀನಿವಾಸಪುರ ತಾಲೂಕಿನ ಅಂಬೇಡ್ಕರ್ ಪಾಳ್ಯದಲ್ಲಿ ಪಾಪಿ ಮಗನೊಬ್ಬ ಮಲಗಿದ್ದ ತಂದೆಯ ರುಂಡದ ಮೇಲೆ ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ.

ಅಂಬೇಡ್ಕರ್ ಪಾಳ್ಯದ ವೆಂಕಟೇಶ್ (65)ಎಂಬಾತನೆ ಮಗನಿಂದಲೇ ಕೊಲೆಯಾದ ದುರ್ದೈವಿ. ನವೀನ್ ಪ್ರಕಾಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.


ಮಗನ ಕೌಟುಂಬಿಕ ಸಮಸ್ಯೆ ಸರಿಪಡಿಸಲು ಮುಂದಾದ ತಂದೆ ಮತ್ತು ಮಗ ನಡುವೆ ಗುರುವಾರ ತಡರಾತ್ರಿ ಗಲಾಟೆ ನಡೆದಿದ್ದು, ಇದೇ ವೇಳೆ ಸಿಟ್ಟಿನಲ್ಲಿ ಮಲಗಿದ್ದ ತಂದೆಯ ತಲೆ ಮೇಲೆ ಅಡುಗೆ ಮನೆಯಲ್ಲಿದ್ದ ರುಬ್ಬುವ ಗುಂಡುಕಲ್ಲನ್ನು ಎತ್ತಿ ಹಾಕಿ ನವೀನ್ ಕೊಲೆ ಮಾಡಿದ್ದಾನೆ. ಸ್ಥಳೀಯರು ನವೀನ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ,. ಇಡೀ ಮನೆ ರಕ್ತಸಿಕ್ತವಾಗಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



- Advertisement -








