Sunday, June 28, 2026
spot_imgspot_img
spot_imgspot_img

ವಿಟ್ಲ: NS ಕ್ರಷರ್ ಮಾಲಕರಿಗೆ ಜೀವ ಬೆದರಿಕೆ; ಬ್ಲೇಡ್ ಸಾದಿಕ್ ಸಹೋದರ ಸಪ್ರಿಲ್ ಯಾನೆ ಚಪ್ಪಿ ಬಂಧನ

- Advertisement -
- Advertisement -

ವಿಟ್ಲ: ಕಲ್ಲಿನ ಕೋರೆಗೆ ನುಗ್ಗಿ ಬೆದರಿಕೆ ಹಾಕಿದ ವಿಚಾರದಲ್ಲಿ ಓರ್ವನನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಟ್ಲ ಕೆನರಾ ಬ್ಯಾಂಕ್ ಸಮೀಪ ನಿವಾಸಿ ಸಪ್ರಿಲ್ ಯಾನೆ ಚಪ್ಪಿ (27) ಬಂಧಿತ ಆರೋಪಿ. ಇಬ್ಬರ ತಂಡ ಎನ್ ಎಸ್ ಕೋರೆಗೆ ನುಗ್ಗಿ ಮ್ಯಾನೇಜರ್ ಗೆ ಬೆದರಿಕೆ ಹಾಕಿದ್ದು, ಅಲ್ಲದೇ ಮಾಲಕನಿಗೆ ಕರೆ ಮಾಡಿ, ಪಾಲುದಾರಿಕೆ ನೀಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದ ಪುಂಡಿಕಾಯ ನಿವಾಸಿ ಎನ್. ಎಸ್. ಅಬ್ದುಲ್ ಕುಂಞ ರವರು ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಬ್ಲೇಡ್ ಸಾಧಿಕ್ ಹಾಗೂ ಆತನ ಸಹೋದರ ಸಪ್ರೀಲ್ ಮತ್ತು ಇನ್ನೊಬ್ಬನ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ ಬ್ಲೇಡ್ ಸಾಧಿಕ್ ನ ಸಹೋದರ ಸಪ್ರೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!