Saturday, July 25, 2026
spot_imgspot_img
spot_imgspot_img

ʼವರ್ಕ್ ಫ್ರಮ್ ಹೋಮ್ʼ ಜಾಹೀರಾತು ನಂಬಿ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿನಿ

- Advertisement -
- Advertisement -

ಶಿವಮೊಗ್ಗ: ಮನೆಯಲ್ಲೇ ಕುಳಿತು ಕೆಲಸ ಮಾಡುವ ಕುರಿತು ವಂಚನೆಗೆ ಒಳಗಾದ ನಗರದ ವಿದ್ಯಾರ್ಥಿನಿಯೊಬ್ಬರು ರೂ.2,12,340 ಹಣ ಕಳೆದುಕೊಂಡ ಘಟನೆ ನಡೆದಿದೆ.ವಿದ್ಯಾರ್ಥಿನಿಯು ಇನ್‌ಸ್ಟಾಗ್ರಾಮ್‌ನಲ್ಲಿ ವರ್ಕ್ ಪ್ರಮ್ ಹೋಮ್ ಜಾಹೀರಾತು ನೋಡಿ ಲಿಂಕ್ ಕ್ಲಿಕ್ ಮಾಡಿದ್ದರು. ನಂತರ ಟೆಲಿಗ್ರಾಮ್ ಮೂಲಕ ಸಂಪರ್ಕಿಸಿದ ವಂಚಕರು, ಹೋಟೆಲ್ ಮತ್ತು ಆಪ್‌ಗಳಿಗೆ ರಿವ್ಯೂ ನೀಡುವ ಟಾಸ್ಕ್ ನೀಡಿದ್ದರು. ಆರಂಭದಲ್ಲಿ ಸಣ್ಣ ಮೊತ್ತದ ಹಣವನ್ನು ಕಟ್ಟಿಸಿಕಂಡು ಟಾಸ್ಕ್ ನೀಡಿ ಬಳಿಕ ವಿದ್ಯಾರ್ಥಿನಿ ಕಟ್ಟಿದ್ದ ಹಣಕ್ಕಿಂತಲು ಹೆಚ್ಚಿಗೆ ಹಣವನ್ನು ಅವರ ಖಾತೆಗೆ ಜಮೆ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು. ಇದನ್ನು ನಂಬಿದ ವಿದ್ಯಾರ್ಥಿನಿ ಹೆಚ್ಚಿನ ಲಾಭಾಂಶದ ಆಸೆಗಾಗಿ ಹಂತ ಹಂತವಾಗಿ ಹೆಚ್ಚುವರಿ ಹಣ ಹೂಡಿಕೆ ಮಾಡಿದ್ದಾರೆ.

ಹೆಚ್ಚಿನ ಲಾಭದ ಆಮಿಷವೊಡ್ಡಿ ಆರೋಪಿಗಳು ವಿದ್ಯಾರ್ಥಿನಿಯಿಂದ ಒಟ್ಟು ರೂ.2,12,340 ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ನಂತರ ಹಣ ವಾಪಸ್ ನೀಡದೆ ಸತಾಯಿಸಿದಾಗ ತಾನು ವಂಚನೆಗೊಳಗಾಗಿರುವುದು ವಿದ್ಯಾರ್ಥಿನಿಗೆ ತಿಳಿದುಬಂದಿದೆ.ಈ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!