Saturday, November 21, 2026
spot_imgspot_img
spot_imgspot_img

ದಕ್ಷಿಣ ಕನ್ನಡ ,ಮೈಸೂರು ಹೊರತುಪಡಿಸಿ ಉಳಿದೆಡೆ ಸರಕಾರಿ ಬಸ್‌ಗಳ ಸಂಚಾರ ಆರಂಭ!

- Advertisement -
- Advertisement -

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ಸೋಮವಾರದಿಂದ ರಾಜ್ಯಾದ್ಯಂತ ಸರಕಾರಿ ಬಸ್‌ಗಳ ಸಂಚಾರ ಪ್ರಾರಂಭವಾಗಿದೆ.

ಅನ್‌ ಲಾಕ್‌ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ಪ್ರಕಾರಗಳ ಬಸ್‌ಗಳು ರಾತ್ರಿ ಕರ್ಫ್ಯೂ ಅವಧಿ ಸಹಿತ ದಿನಪೂರ್ತಿ ಸಂಚರಿಸಲಿದ್ದು, ಪ್ರಯಾಣಿಕರ ಅನುಗುಣವಾಗಿ ನಿಗಮವು ಅನುಸೂಚಿಗಳ ವ್ಯವಸ್ಥೆ ಕಲ್ಪಿಸಲಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದ.ಕ.ದಲ್ಲಿ ಬಸ್‌ ಸಂಚಾರ ಇಲ್ಲ ಎಂದು ರವಿವಾರ 2ನೇ ಹಂತದ ಸಡಿಲಿಕೆಯ ಆದೇಶ ಹೊರಡಿಸಿದ್ದು, ಜಿಲ್ಲೆಯ ಮೂಲಕ ಮತ್ತು ಒಳಗೆ ಬಸ್‌ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮಂಗಳೂರು ಸರಹದ್ದಿನ ಹೊರಗೆ ಬಸ್‌ಗಳು ನಿಲುಗಡೆ ಆಗಲಿವೆ.

ಮೈಸೂರಿನಲ್ಲೂ ಬಸ್‌ ವ್ಯವಸ್ಥೆ ಇಲ್ಲ. ಮೈಸೂರು ದಾಟಿ ಹೋಗಬೇಕಾದ ಬಸ್‌ಗಳು ಹೊರವಲಯದ ಮೂಲಕವೇ ಹಾದುಹೋಗಬೇಕು. ಜಿಲ್ಲೆಯಲ್ಲಿ ಯಾರಿಗೂ ಬಸ್ಸೇರಲು, ಇಳಿಯಲು ಅವಕಾಶವಿಲ್ಲ. ಸ್ಥಳೀಯ ಸಾರಿಗೆ ಇರುವುದಿಲ್ಲ. ಪ್ರಯಾಣಿಕರು ಮತ್ತು ಸಿಬಂದಿಯ ಹಿತದೃಷ್ಟಿಯಿಂದ ಎರಡೂ ಲಸಿಕೆ ಪಡೆದ ಸಿಬಂದಿಯನ್ನು ಆದ್ಯತೆಯ ಮೇರೆಗೆ ಕರ್ತವ್ಯಕ್ಕೆ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

- Advertisement -

Related news

error: Content is protected !!