Friday, July 11, 2025
spot_imgspot_img
spot_imgspot_img

ಪ್ರಧಾನಿ ಮೋದಿ ಪ್ರಕಟಿಸಿದ್ದ ಉಚಿತ ಪಡಿತರ ವಿತರಣೆ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ

- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದ ಉಚಿತ ಪಡಿತರ ವಿತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮತ್ತೆ 5 ತಿಂಗಳ ಅವಧಿಗೆ ಅಂದರೆ ಜುಲೈನಿಂದ ನವೆಂಬರ್​ವರೆಗೆ ವಿಸ್ತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಕೊಂಡಿದೆ.

ಈ ಯೋಜನೆಯಡಿ ಅರ್ಹ ಕುಟುಂಬಗಳ 81.35 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ಸಿಗಲಿದೆ. ಮೊದಲಿಗೆ ಎಪ್ರಿಲ್, ಮೇ ಮತ್ತು ಜೂನ್​ನ ಮೂರು ತಿಂಗಳ ಅವಧಿಗೆ ಎಂದು ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇದೀಗ ಮತ್ತೆ 5 ತಿಂಗಳ ಅವಧಿಗೆ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಕೆಲ ದಿನಗಳ ಹಿಂದೆ ಪ್ರಧಾನಿ ಪ್ರಕಟಿಸಿದ್ದರು. ಈ ಪ್ರಸ್ತಾವಕ್ಕೆ ಈಗ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರವು ₹67,266.44 ಕೋಟಿ ವೆಚ್ಚ ಮಾಡಲಿದೆ. ಈ ಯೋಜನೆಯಡಿ ರಾಜ್ಯಗಳಿಗೆ 204 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಸಿಗಲಿದೆ ಎಂದು ಕೇಂದ್ರ ಆಹಾರ ಇಲಾಖೆ ವಿವರಿಸಿದೆ.

ಕೇಂದ್ರ ಸಚಿವ ಸಂಪುಟವು ಮತ್ತೊಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅದರಂತೆ ಸೆಂಟ್ರಲ್ ರೈಲ್​ಸೈಡ್​ ವೇರ್​ಹೌಸ್​ ಕಂಪನಿಯನ್ನು ಸೆಂಟ್ರಲ್ ವೇರ್​ಹೌಸಿಂಗ್ ಕಾರ್ಪೋರೇಷನ್​​ನಲ್ಲಿ ವಿಲೀನಗೊಳಿಸಲು ಕೇಂದ್ರ ಸಂಪುಟ ತೀರ್ಮಾನಿಸಿದೆ. ಮಿನಿಮಮ್ ಗವರ್ನಮೆಂಟ್ – ಮ್ಯಾಗ್ಸಿಮಮ್ ಗವರ್ನನ್ಸ್​ ಘೋಷಣೆಯ ಆಶಯವನ್ನು ಜಾರಿ ಮಾಡುವ ಉದ್ದೇಶದಿಂದ ವಿಲೀನದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆ ಹೇಳಿದೆ.

ವಿಲೀನದ ಬಳಿಕ ನಿರ್ವಹಣೆ ವೆಚ್ಚ ₹ 5 ಕೋಟಿಗೂ ಅಧಿಕ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸದಾಗಿ ಇನ್ನೂ 50 ರೈಲ್​ಸೈಡ್ ವೇರ್​ಹೌಸ್ ​ನಿರ್ಮಾಣಕ್ಕೆ ಈ ಕ್ರಮದಿಂದ ಉಪಯೋಗವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!