Saturday, August 29, 2026
spot_imgspot_img
spot_imgspot_img

ಮದುವೆಯಾಗಿ ಮೂರು ತಿಂಗಳು ಆಗಿಲ್ಲ ಮತ್ತೊಬ್ಬಳು ಅಪ್ರಾಪ್ತೆ ಆರು ತಿಂಗಳ ಗರ್ಭಿಣಿ!

- Advertisement -
- Advertisement -

ತಿರುವನಂತಪುರಂ: ಲೈಂಗಿಕವಾಗಿ ಬಳಸಿಕೊಂಡು ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇಲೆ ಯುವಕನನ್ನು ಕೇರಳದ ಕಜಕ್ಕೂಟಮ್​ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಖಿನೇಶ್​ ಅಶೋಕ್​ (21) ಚಾರಿಟಿ ಕೆಲಸದ ಮೇಲೆ ಇನ್​ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಸಂಪರ್ಕಿಸಿದ್ದನು.

ಆರೋಪಿಯು​ ಮೂರು ತಿಂಗಳ ಹಿಂದಷ್ಟೆ ಬೇರೊಂದು ಮದುವೆಯಾಗಿದ್ದನು. ಆದರೆ, ಆತ ಆನ್​ ಲೈನ್​ ಮೂಲಕ ಮತ್ತೊಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಸೆಪ್ಟೆಂಬರ್​ನಿಂದ ಅನೇಕ ಬಾರಿ ಅಪ್ರಾಪ್ತೆಯನ್ನು ಆರೋಪಿ ತನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿ ಆಗಿರುವ ಅಪ್ರಾಪ್ತೆಯನ್ನು ಆಶ್ರಯ ಮನೆಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ. ಅಪ್ರಾಪ್ತೆಯು ತನ್ನ ತಾಯಿ, ಮಲತಂದೆ ಮತ್ತು ಅಜ್ಜಿಯ ಜತೆ ವಾಸವಿದ್ದಳು. ಆಕೆಯ ತಾಯಿ ಕುಟುಂಬವನ್ನು ಬಿಟ್ಟು ಬೇರೋಬ್ಬನನ್ನು ಮದುವೆಯಾಗಿದ್ದಾರೆ. ಅಜ್ಜಿ ಮನೆಯಲ್ಲಿ ಇರುವಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.

- Advertisement -

Related news

error: Content is protected !!