Monday, October 26, 2026
spot_imgspot_img
spot_imgspot_img

ಗಂಡ ವಿಪರೀತ ಪಾನ್ ಪರಾಗ್ ತಿನ್ನುತ್ತಿದ್ದನೆಂದು ಪ್ರೇಮಿಯೊಂದಿಗೆ ಪರಾರಿಯಾದ ವಿವಾಹಿತೆ!

- Advertisement -
- Advertisement -

ಕೇರಳ: ವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಓಡಿಹೋಗಿ ಬಳಿಕ ಪೊಲೀಸರಿಗೆ ಶರಣಾಗಿ ಕಥೆಯನ್ನು ಬಿಚ್ಚಿಟ್ಟ ಘಟನೆ ಕೇರಳದ ಪಾಲಕ್ಕಾಡ್ ಎಂಬಲ್ಲಿ ನಡೆದಿದೆ

ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬಲ್ಲಿ 22 ವರ್ಷದ ಗೃಹಿಣಿಯೋರ್ವಳು ಆಕೆ ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಓಡಿ ಹೋಗಿದ್ದಳು. ಪೊಲೀಸರು ಹುಡುಕಾಟದಲ್ಲಿ ತೊಡಗಿದಾಗ ಪೊಲೀಸರಿಗೆ ಬಂದು ಶರಣಾಗಿದ್ದಾಳೆ.

ಆಕೆಯ ಗಂಡ ವಿಪರೀತ ಪಾನ್ ಪರಾಗ್ ಹಾಗೂ ಮದ್ಯ ಸೇವನೆ ಮಾಡುತ್ತಿದ್ದನು. ಈ ಕಾರಣಕ್ಕೆ ಆತನೊಂದಿಗೆ ಬಾಳ್ವೆ ಮಾಡುವುದು ಕಷ್ಟವಾಗಿತ್ತು. ವಿಪರೀತವಾಗಿ ಗುಟ್ಕಾ ತಿನ್ನುತ್ತ, ಮದ್ಯ ಸೇವನೆ ಮಾಡುತ್ತಿರುವುದರಿಂದ ಆತನ ಬಾಯಿಂದ ಗಬ್ಬು ವಾಸನೆ ಹೊರ ಹೊಮ್ಮುತ್ತಿತ್ತು. ಅಂತಹ ಗಂಡನನ್ನು ನಾನು ಹೇಗೆ ಪ್ರೀತಿಸಲಿ ಎಂದು ಆ ವಿವಾಹಿತೆ ಹೇಳಿದ್ದಾಳೆ. ಅಲ್ಲದೆ ಆತ ಹಿಂಸೆ ನೀಡುತ್ತಿದ್ದು ದೌರ್ಜನ್ಯ ಸಹಿಸಲಾಗದೆ ಪ್ರೇಮಿಯೊಂದಿಗೆ ಓಡಿಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ.

- Advertisement -

Related news

error: Content is protected !!