Sunday, September 20, 2026
spot_imgspot_img
spot_imgspot_img

ಮಂಗಳೂರು: ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ಅನ್ಯಕೋಮಿನ ಯುವಕರೊಂದಿಗೆ ತಂಗಿದ್ದ ಹಿಂದೂ ಯುವತಿಯರು; ಹಿಂದೂ ಜಾಗರಣ ವೇದಿಕೆಯ ಮಾಹಿತಿ ಮೇರೆಗೆ ಪೋಲಿಸರಿಂದ ದಾಳಿ, 4 ಜೋಡಿ ಪೋಲಿಸ್ ವಶಕ್ಕೆ…!!

- Advertisement -
- Advertisement -

ಮಂಗಳೂರು: ಹಿಂದೂ ಜಾಗರಣ ವೇದಿಕೆ ವಿಟ್ಲ, ಬಂಟ್ವಾಳ ಮತ್ತು ಪುತ್ತೂರು ಜಿಲ್ಲಾ ಪ್ರಮುಖರ ಮಾಹಿತಿ ಮೇರೆಗೆ ಅನ್ಯಕೋಮಿನ ಯುವಕರೊಂದಿಗೆ ಇದ್ದ ಹಿಂದೂ ಯುವತಿಯರನ್ನು ಮಂಗಳೂರಿನ ಬಂದರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಇಂದು ನಡೆದಿದೆ.

ಕೆಲ ದಿನಗಳಿಂದ ಕೊಂಚಾಡಿ ವಸತಿ ನಿಲಯದಲ್ಲಿ ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರು ಇರುವ ಜೋಡಿಗಳು ತಂಗಿವೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿತ್ತು.

ಆದರೆ ಇದರ ಬೆನ್ನು ಬಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸುಮಾರು ದಿನಗಳ ಪತ್ತೇಧಾರಿ ಕಾರ್ಯಾಚರಣೆ ನಡೆಸಿದ್ದು, ಇಂದು ಮತ್ತೆ ಅದೇ ಮೊದಲಿನ ಎರಡು ಜೋಡಿ ಸೇರಿ ಒಟ್ಟು 4 ಜೋಡಿಗಳು ಸಾಯಿ ಪ್ಯಾಲೇಸ್ ಹೋಟೆಲ್ ನಲ್ಲಿ ತಂಗಿರುವ ಮಾಹಿತಿ ಕಲೆಹಾಕಿದ್ದರು‌.

ಸರಿಯಾದ ಮಾಹಿತಿಯೊಂದಿಗೆ ಬಂದರು ಪೋಲಿಸರಿಂದ ದಾಳಿ ಮಾಡಿಸಿದ್ದು, ಅನ್ಯ ಕೋಮಿನ ಜೋಡಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ‌. ರೂಂ‌ ನಂಬರ್ 208 ರಲ್ಲಿ ಯುವತಿಯರು ಹಾಗೂ ರೂಂ ನಂಬರ್ 407 ರಲ್ಲಿ ಯುವಕರು ವಾಸ್ತವ್ಯವಿದ್ದು, ಮೊದಲೇ ಪ್ರಿ ಪ್ಲ್ಯಾನ್ ಮಾಡಿದ್ದರು ಎನ್ನಲಾಗಿದೆ.

ವಶಕ್ಕೆ ಪಡೆದವರಲ್ಲಿ ಸುರತ್ಕಲ್ ಹಾಗೂ ಅತ್ತಾವರದ ಯುವತಿಯರು ಇದ್ದರು ಎಂಬ ಖಚಿತ ಮಾಹಿತಿ ಲಭಿಸಿದೆ‌. ಕಾರ್ಯಾಚರಣೆ ವೇಳೆ ಹಿಂದೂ ಜಾಗರಣ ವೇದಿಕೆ ವಿಟ್ಲ , ಬಂಟ್ವಾಳ, ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

ಇಡೀ ದೇಶವೇ ಕೊರೊನಾ ಪರಿಸ್ಥಿತಿಯಿಂದ ಕಂಗೆಟ್ಟಿರುವ ಈ ಸಂದರ್ಭದಲ್ಲಿ ಯುವ ಜನಾಂಗ ಈ ರೀತಿ ದಾರಿ ತಪ್ಪುತ್ತಿರುವುದು ವಿಷಾದನೀಯವಾಗಿದೆ.

ಆರೋಪಿಗಳ ವಿರುದ್ಧ ಮತ್ತು ಸಾಯಿ ಪ್ಯಾಲೇಸ್ ಹೊಟೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಆಗ್ರಹಿಸುತ್ತದೆ.

- Advertisement -

Related news

error: Content is protected !!