- Advertisement -
- Advertisement -
ತುಮಕೂರು: ಅಕ್ರಮ ಸಂಬಂಧ ಹೊಂದಿದ ಸೊಸೆ ಪ್ರಶ್ನಿಸಿದಕ್ಕೆ ಅತ್ತೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಜ್ಜನಕುಂಟೆ ಗ್ರಾಮದಲ್ಲಿ ನಡೆದಿದೆ.

ಜೂನ್ 14 ರಂದು ಸೊಸೆಯಾದ ಸುಧಾಮಣಿ ಅತ್ತೆ ಸರೋಜಮ್ಮ ಅವರನ್ನು ಕೊಲೆ ಮಾಡಿದ್ದಳು. ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಕೊಲೆ ವಿಚಾರ ಗೊತ್ತಾಗಿದೆ. ಸುಧಾಮಣಿ ಮತ್ತು ಆಕೆಯ ಪ್ರಿಯಕರ ಶ್ರೀರಂಗಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



- Advertisement -








