Tuesday, September 1, 2026
spot_imgspot_img
spot_imgspot_img

ಇಬ್ಬರು ಮಕ್ಕಳ ಜೀವಕ್ಕೆ ಉರುಳಾದ ಅಮ್ಮನ ಸೀರೆಯ ಜೋಕಾಲಿ..!

- Advertisement -
- Advertisement -

ಕೊಡುಗು: ಅಮ್ಮನ ಸೀರೆಯಲ್ಲಿ ಉಯ್ಯಾಲೆ ಕಟ್ಟಿ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಅದೇ ಉಯ್ಯಾಲೆಯಿಂದ ಜೀವ ಕಳೆದುಕೊಂಡ ದಾರುಣ ಘಟನೆ ಸೋಮವಾರಪೇಟೆ ತಾಲೂಕಿನ ಗಣಗೂರು ಉಂಜಿಗನ ಹಳ್ಳಿಯಲ್ಲಿ ನಡೆದಿದೆ.

ಉಂಜಿಗನ ಹಳ್ಳಿಯ ನಿವಾಸಿ ರಾಜು ಹಾಗೂ ಜಯಂತಿ ಎಂಬವರ ಮಕ್ಕಳಾದ ಪ್ರತಿಕ್ಷ ಹಾಗೂ ಪೂರ್ಣೆಶ್ ಜೀವ ಕಳೆದುಕೊಂಡವರು.

ಬುಧವಾರ ಮನೆಯಲ್ಲಿ ಇಬ್ಬರೇ ಇದ್ದರು. ಈ ವೇಳೆ, ಇಬ್ಬರು ಮಕ್ಕಳು ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡಿದೆ. ಇದರ ಪರಿಣಾಮ ಅಕ್ಕ- ತಮ್ಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆ ನಡೆದ ಹಲವು ಗಂಟೆಯ ಬಳಿಕ, ಕೆಲಸಕ್ಕೆ ತೆರಳಿದ್ದ ಮಕ್ಕಳ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಎರಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೇಳಗಿಳಿಸಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆನ್ನಲಾಗಿದೆ.

- Advertisement -

Related news

error: Content is protected !!