Tuesday, August 4, 2026
spot_imgspot_img
spot_imgspot_img

ಕೇರಳ ರಾಜ್ಯದಲ್ಲಿ ‘ಜೈಕಾ’ ಎಂಬ ಹೆಸರಿನ ಮತ್ತೊಂದು ವೈರಸ್ ಪತ್ತೆ!

- Advertisement -
- Advertisement -

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಇದೀಗ ‘ಜೈಕಾ’ ಎಂಬ ಹೆಸರಿನ ಮತ್ತೊಂದು ವೈರಸ್ ಪತ್ತೆಯಾಗಿದೆ.

‘ಜೈಕಾ’ ಎಂಬ ವೈರಸ್ ತಿರುವನಂತಪುರಂನ 24 ವರ್ಷದ ಮಹಿಳೆಯಲ್ಲಿ ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಜೂನ್ 28 ರಿಂದ ಈಕೆಗೆ ಇದರ ಲಕ್ಷಣಗಳು ಕಂಡುಬಂದಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆ ಜೂನ್ 7ಕ್ಕೆ ಮಗುವಿಗೆ ಜನ್ಮ ನೀಡಿದ್ದು, ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ಜೈಕಾದ ಲಕ್ಷಣಗಳು ಡೆಂಗ್ಯೂ ಜ್ವರದಂತೆ ಹೋಲುತ್ತದೆ. ಜ್ವರ, ಕಾಲು ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ. ಈ ಗುಣಲಕ್ಷಣಗಳು ಮಹಿಳೆಯ ತಾಯಿಗೂ ವಾರದ ಹಿಂದೆಯ ಕಂಡುಬಂದಿತ್ತು. ಇನ್ನೂ 13 ಮಂದಿಗೆ ಈ ಜೈಕಾ ವೈರಸ್ ತಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ನಿಂದ ಅವರುಗಳ ವರದಿಗಾಗಿ ಕಾಯಲಾಗುತ್ತಿದೆ. ನಂತರ ಖಚಿತವಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

- Advertisement -

Related news

error: Content is protected !!