Tuesday, September 1, 2026
spot_imgspot_img
spot_imgspot_img

ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೂ ದಾಳಿಯಾಗಲಿ; ಡಿ.ವಿ.ಎಸ್ ಹೇಳಿಕೆಯ ವೀಡಿಯೋ ವೈರಲ್..!

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಸಂಪುಟದಿಂದ ಡಿ.ವಿ. ಸದಾನಂದ ಗೌಡ ಅವರು ಹೊರ ಹೋಗುತ್ತಿದ್ದಂತೆ, ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ ಎನ್ನಲಾದ ವೀಡಿಯೊವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷರವರೆಗೆ ಎಲ್ಲಾ ರಾಜಕಾರಣಿಗಳ ಮನೆಗೂ ರೈಡ್ ಆಗಲಿ ಎಂದು ಡಿ.ವಿ. ಸದಾನಂದ ಗೌಡ ಹೇಳಿದ ಆಡಿಯೋ ಇದಾಗಿದೆ.

ರಾಜಕೀಯ ಎಂದರೆ ವ್ಯಾಪಾರ. ರಾಜಕೀಯದಲ್ಲಿ ಬರೀ ತಿನ್ನೋದೇ ಆಗಿದೆ. ಹಣ ಹಾಕು, ಹಣ ವಾಪಾಸ್ ತೆಗಿ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ಎಲ್ಲಾ ಪಕ್ಷದಲ್ಲೂ ಇಂತಹ ರಾಜಕಾರಣ ನಡೆಯುತ್ತಿದೆ. ಹಾಗೆಂದು ಎಲ್ಲರೂ ಎಂದು ಹೇಳುತ್ತಿಲ್ಲ.

ಎಲ್ಲಾ ಪಕ್ಷಗಳಲ್ಲೂ ಶೇ. 25ರಷ್ಟು ಮಂದಿ ಒಳ್ಳೆಯವರು ಇದ್ದಾರೆ. ಉಳಿದ ಶೇ.75ರಷ್ಟು ಮಂದಿ ಹಣ ಮಾಡುವುದರಲ್ಲೇ ತೊಡಗಿದ್ದಾರೆ. ಬಾಡೂಟ ಹಾಕಿದರೆ ಮಾತ್ರ ಓಟು ಹಾಕುತ್ತಾರೆ. ಪ್ರಾಮಾಣಿಕ ರಾಜಕಾರಣಿಗಳಿಗೆ ಅವಕಾಶ ಇದೆಯೇ? ಕರ್ನಾಟಕದಲ್ಲೂ ಇಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕು. ಜನ ಎಚ್ಚೆತ್ತುಕೊಳ್ಳದೇ ಹೋದರೆ, ಏನೂ ಆಗಲ್ಲ” ಎಂದು ವೀಡಿಯೋದಲ್ಲಿ ದಾಖಲಾಗಿದೆ.

- Advertisement -

Related news

error: Content is protected !!