Friday, June 27, 2025
spot_imgspot_img
spot_imgspot_img

5 ವರ್ಷದ ಪ್ರೀತಿ ಅತ್ಯಾಚಾರದಲ್ಲಿ ಅಂತ್ಯ..!!

- Advertisement -
- Advertisement -

ಮೈಸೂರು: ಮಿಸ್ಡ್ ಕಾಲ್ ನಿಂದ ಆರಂಭವಾದ ಪ್ರೀತಿ, ಅತ್ಯಾಚಾರದಲ್ಲಿ ಕೊನೆಗೊಂಡ ದುರಂತ ಪ್ರಕರಣವೊಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಅತ್ಯಾಚಾರದ ಆರೋಪಿ ಸಲಾವುದ್ದೀನ್ (26). ಈತ ನಂಜನಗೂಡು ಪಟ್ಟಣದಲ್ಲಿ ಹೋಲ್ ಸೇಲ್ ಹಣ್ಣಿನ ವ್ಯಾಪಾರಿಯಾಗಿದ್ದ ಎಂದು ಹೇಳಲಾಗಿದೆ.

ಯುವತಿಯೊಬ್ಬಳು ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿದ್ದು, ಬಳಿಕ ಪರಿಚಯ ಪ್ರೀತಿಗೆ ತಿರುಗಿತ್ತು. 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು, ಮದುವೆಯಾಗಲೂ ನಿರ್ಧರಿಸಿದ್ದರು. ಈ ಮಧ್ಯೆ ಸಲಾವುದ್ದೀನ್ ಸಂತ್ರಸ್ತ ಯುವತಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೇ, ಆಕೆಯಿಂದ ಸಾಕಷ್ಟು ಹಣವನ್ನು ಕೂಡ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದೆ. ಈ ಘಟನೆಯ ಬಳಿಕ ಸಲಾವುದ್ದೀನ್ ಇದೀಗ ಬೇರೊಂದು ಯುವತಿಯೊಂದಿಗೆ ಮದುವೆಯಾಗಿ ವಂಚಿಸಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತ ಯುವತಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!