Wednesday, July 22, 2026
spot_imgspot_img
spot_imgspot_img

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಪುತ್ತೂರು, ಕಬಕ ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಪುತ್ತೂರು, ಕಬಕ ಬಿಲ್ಲವ ಗ್ರಾಮ ಸಮಿತಿ ಇದರ ವಾರ್ಷಿಕ ಮಹಾಸಭೆ ಮತ್ತು ಪದಾಧಿಕಾರಿಗಳ ಆಯ್ಕೆ ಸುದಾನ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಹಾಸಭೆ ಉದ್ಘಾಟಿಸಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.

ಗೌರವಾಧ್ಯಕ್ಷರಾಗಿ ಜಿನ್ನಪ್ಪ ಪೂಜಾರಿ, ಮಾದವ ಪಟ್ಲ, ಅಧ್ಯಕ್ಷರಾಗಿ ಸಂತೋಷ್ ಮುರ, ಉಪಾಧ್ಯಕ್ಷರಾಗಿ ಧನಂಜಯ ಪಟ್ಲ, ಕಾರ್ಯದರ್ಶಿಯಾಗಿ ಶ್ರೀಕಾಂತ್ ಪೂಜಾರಿ ಬಿರಾವು, ಜೊತೆ ಕಾರ್ಯದರ್ಶಿಯಾಗಿ ನಿತಿನ್ ಬಿರಾವು, ಕೋಶಾಧಿಕಾರಿಯಾಗಿ ರಜನೀಶ್, ಸಂಚಾಲಕರಾಗಿ ಸುರೇಶ್ ಪೂಜಾರಿ, ಸಲಹೆಗಾರರಾಗಿ ವಸಂತ ಪೂಜಾರಿ ಮುರ ರವರನ್ನು ಆಯ್ಕೆ ಮಾಡಲಾಯಿತು.

ಮಹಿಳಾ ಘಟಕದ ಅಧ್ಯಕ್ಷರಾಗಿ ಕುಶಾಲವತಿ, ಉಪಾಧ್ಯಕ್ಷರಾಗಿ ಗೀತಾ, ಕಾರ್ಯದರ್ಶಿ ಧನವತಿ, ಕೋಶಾಧಿಕಾರಿ ಲಹರಿ ಕೋಟ್ಯಾನ್, ಜೊತೆ ಕಾರ್ಯದರ್ಶಿ ಚಂದ್ರವತಿ ರವರನ್ನು ಆಯ್ಕೆ ಮಾಡಲಾಯಿತು.

ಪುತ್ತೂರು ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷ ವಿನಯ ವಸಂತ, ನಿಕಟಪೂರ್ವ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ಗೌರವಧ್ಯಕ್ಷರಾದ ಮಾದವ ಪಟ್ಲ, ವಿಶ್ವ ಅಲ್ಯೂಮಿನಿಯಂ ಪ್ರಾಬಿಕೇಷನ್ ಮಾಲಕರಾದ ವಸಂತ ಪೂಜಾರಿ, ವಿಷ್ಣು ಮೆಟಲ್‌ನ ಮಾಲಕರಾದ ಕೇಶವ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!