Tuesday, April 30, 2024
spot_imgspot_img
spot_imgspot_img

ಹೆಚ್ಚುತ್ತಿರುವ ಝಿಕಾ ವೈರಸ್; ಇಂದು ಐದು ಪ್ರಕರಣಗಳು ಪತ್ತೆ!

- Advertisement -G L Acharya panikkar
- Advertisement -

ಕೇರಳ: ಕೊರೊನಾ ಆತಂಕದ ನಡುವೆಯೇ ಕೇರಳದಲ್ಲಿ ಝಿಕಾ ವೈರಸ್​ ಭಯ ಕೂಡ ಶುರುವಾಗಿದೆ. ಐದು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರಲ್ಲಿ ಝಿಕಾ ವೈರಸ್​ ಸೋಂಕು ಪತ್ತೆಯಾಗಿತ್ತು. ಇದೀಗ ಕೇರಳದಲ್ಲಿ ಇನ್ನೂ ಐದು ಹೊಸ ಝಿಕಾ ಪ್ರಕರಣಗಳು ಬೆಳಕಿಗೆ ಬಂದಿದೆ. ಒಟ್ಟು ಝಿಕಾ ಸೋಂಕಿತರ ಸಂಖ್ಯೆ 28 ಆಗಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.

ಈ ಐದು ಹೊಸ ಝಿಕಾ ಪ್ರಕರಣಗಳಲ್ಲಿ ಇಬ್ಬರು ಸೋಂಕಿತರು ಅನಾಯರಾ, ಹಾಗೂ ಉಳಿದ ಮೂವರು ಕುನ್ನುಕುಜಿ, ಪಾಟ್ಟೋಮ್​ ಮತ್ತು ಈಸ್ಟ್​ ಫೋರ್ಟ್​ಗೆ ಸೇರಿದವರಾಗಿದ್ದಾರೆ. ಸೊಳ್ಳೆಯಿಂದ ಹರಡುತ್ತಿರುವ ಈ ರೋಗವನ್ನ ತಡೆಗಟ್ಟುವ ಸಲುವಾಗಿ ತಿರುವನಂತಪುರಂ ಮುನ್ಸಿಪಾಲ್​ ಕಚೇರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಹೈ ಅರ್ಲಟ್​​ ಘೋಷಣೆ ಮಾಡಲಾಗಿದೆ.

- Advertisement -

Related news

error: Content is protected !!