Tuesday, May 21, 2024
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಮರಳುಗಾರಿಕೆ ಪೊಲೀಸ್ ದಾಳಿ; ಹಿಟಾಚಿ, ಟಿಪ್ಪರ್‍ ಸಹಿತ ಮರಳು ವಶಕ್ಕೆ ,ಆರೋಪಿಗಳು ಪರಾರಿ..!

- Advertisement -G L Acharya panikkar
- Advertisement -

ಬಂಟ್ವಾಳ: ನೇತ್ರಾವತಿ ನದಿಯ ನಿರ್ಮಾಣ ಹಂತದ ಡ್ಯಾಂ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಹಿಟಾಚಿ, ಟಿಪ್ಪರ್ ಹಾಗೂ ಇತರ ಸಾಮಾಗ್ರಿಗಳ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.

ಆರೋಪಿಗಳನ್ನು ಅಬ್ದುಲ್ ಮುತಾಲಿಬ್ @ ನಾವೂರು ಪುತ್ತಾ ಹಾಗೂ ಇತರರು ಎಂದು ಪೊಲೀಸರು ತಿಳಿಸಿದ್ದಾರೆ,

ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ನಿರ್ಮಾಣ ಹಂತದಲ್ಲಿರುವ ಡ್ಯಾಮ್ ನ ಬಳಿ, ನದಿಯಿಂದ ಕಳ್ಳತನದಿಂದ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ‌ ಮೇರೆಗೆ, ರಾಮ ಕೃಷ್ಣ ಪಿ ಎಸ್ ಐ (ಕಾ&ಸು) ಬಂಟ್ವಾಳ ನಗರ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ, ನದಿಯ ದಡದಲ್ಲಿ ಮರಳನ್ನು ರಾಶಿ ಹಾಕಿರುವುದು ಮತ್ತು 1 ಟಿಪ್ಪರ್ ಲಾರಿ, 1 ಹಿಟಾಚಿ ವಾಹನವನ್ನು ನಿಲ್ಲಿಸಿಕೊಂಡಿರುವುದು ಕಂಡು ಬಂದಿದೆ. ಮರಳು ತೆಗೆಯುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.

ನದಿಯ ದಡದಲ್ಲಿ ಸುಮಾರು 6-7 ಟಿಪ್ಪರ್ ಲಾರಿ ಲೋಡ್ ಗಳಷ್ಟು ಮರಳನ್ನು ರಾಶಿ ಹಾಕಿದ್ದು, ಮರಳನ್ನು ತೆಗೆಯಲು ಬಳಸಿದ ಹಾರೆ, ಪೈಬರ್ ಬುಟ್ಟಿಗಳು ಹಾಗೂ ಇತರ ಸೊತ್ತುಗಳು ಕಂಡು ಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮರಳನ್ನು ಟಿಪ್ಪರ್ ಲಾರಿಗೆ ತುಂಬಿಸಲು ಬಳಸಿದ ಹಿಟಾಚಿ ವಾಹನ, ಮರಳನ್ನು ತುಂಬಿಸಿ ಸಾಗಾಟ ಮಾಡಲು ನಿಲ್ಲಿಸಿದ್ದ ಕೆಎ-19-ಸಿ-4245ನೇ ಟಿಪ್ಪರ್, ರಾಶಿ ಹಾಕಿದ್ದ ಮರಳು ಮತ್ತು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳಾದ ಅಬ್ದುಲ್ ಮುತಾಲಿಬ್ @ ನಾವೂರು ಪುತ್ತಾ ಮತ್ತು ಇತರರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ, ಅ.ಕ್ರ:- 81/2024, ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!