Sunday, June 28, 2026
spot_imgspot_img
spot_imgspot_img

ಪ್ರಿಯತಮೆಯ ಎದುರಲ್ಲೇ ಯುವಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ..!

- Advertisement -
- Advertisement -

ಪ್ರಿಯತಮೆಯ ಮನೆಗೆ ಕದ್ದು ಮುಚ್ಚಿ ಹೋಗಿದ್ದ ಆತ. ಆದ್ರೆ ಅಲ್ಲಿ ನಡೆದದ್ದು ಮನ ಹಿಂಡುವ ಘಟನೆ. ಪ್ರೀತಿಸಿ ಆಕೆಯ ಜೊತೆಗೆ ಹೋಗಿದ್ದೇ ದೊಡ್ಡ ತಪ್ಪಾಗಿದೆ. ಕುಟುಂಬಸ್ಥರು ಸೇರಿಕೊಂಡು ಮಾಡಿದ ಈ ಕೃತ್ಯದಿಂದ ಹುಡುಗ ಸಾವನ್ನಪ್ಪಿದ್ದಾನೆ..! ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 17ವರ್ಷದ ಬಾಲಕ ಇದೇ ಕಾರಣಕ್ಕೀಗ ಹತ್ಯೆಯಾಗಿದ್ದಾನೆ. ಹುಡುಗಿಯ ಕುಟುಂಬದ ಕಡೆಯವರು ಗುಪ್ತಾಂಗವನ್ನೂ ಕತ್ತರಿಸಿ, ಭೀಕರವಾಗಿ ಇವನನ್ನು ಕೊಂದಿದ್ದಾರೆ.

ರೇಪುರಾ ರಾಮಪುರಶಾಹ್ ಹಳ್ಳಿಯಲ್ಲಿ ದುರ್ಘಟನೆ ನಡೆದಿದೆ. ಮೃತ ಬಾಲಕನ ಹೆಸರು ಸೌರಭ್ ಕುಮಾರ್, ಈ ಗ್ರಾಮದ ಪಕ್ಕದಲ್ಲೇ ಇರುವ ಸೊರ್ಬಾರಾ ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಸೌರಭ್ ತನ್ನ ಗರ್ಲ್ ಫ್ರೆಂಡ್ ಮನೆಗೆ ಹೋಗಿದ್ದಾಗ ಇಬ್ಬರೂ ಜೊತೆಯಲ್ಲೇ ಸಿಕ್ಕಿಬಿದ್ದಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲ, ಗುಪ್ತಾಂಗವನ್ನೂ ಕತ್ತರಿಸಿದ್ದಾರೆ. ಅಷ್ಟರಲ್ಲಿ ಹುಡುಗನ ಕುಟುಂಬದವರಿಗೆ ವಿಷಯ ಗೊತ್ತಾಗಿ, ಅವರೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಒಂದು ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಿದರೂ ಸಹ ಯಾವುದೇ ಪುಯೋಜನ ಆಗಲಿಲ್ಲ. ಅಂದೇ ರಾತ್ರಿ ಮೃತಪಟ್ಟಿದ್ಯಾನ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಸೌರಭ್ ಕುಮಾರ್ ಕುಟುಂಬದವರು ಇದರಿಂದ ತೀವ್ರವಾಗಿ ಕೋಪಗೊಂಡಿದ್ದಲ್ಲದೆ, ಹುಡುಗಿಯ ಮನೆಯ ಎದುರೇ ಸೌರಭ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ಪ್ರೀತಿ ವಿಚಾರಕ್ಕೆ ಬಾಲಕನನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!