Tuesday, April 30, 2024
spot_imgspot_img
spot_imgspot_img

ಕೇರಳದ ಕಡಲಾಳದಲ್ಲಿ ಬೃಹತ್ ನೀಲಿ ತಿಮಿಂಗಿಲ ಪತ್ತೆ..!

- Advertisement -G L Acharya panikkar
- Advertisement -

ಕೊಚ್ಚಿ: ಕೇರಳ ರಾಜ್ಯದ ಕಡಲಾಳದಲ್ಲಿ 150-199 ಟನ್‌ ತೂಕವುಳ್ಳ ಬೃಹತ್‌ ನೀಲಿ ತಿಮಿಂಗಿಲವೊಂದು ಇರುವುದು ದೃಢವಾಗಿದೆ. ವಿಳಿಜಂನಲ್ಲಿ ಸಮುದ್ರದೊಳಗೆ ಸ್ಥಾಪಿಸಲಾಗಿರುವ ಹೈಡ್ರೋಫೋನ್‌ ಮೂಲಕ ಇದರ ಇರವು ಪತ್ತೆಯಾಗಿದೆ.

ಪ್ರಸ್ತುತ ಭೂಮಿಯಲ್ಲಿರುವ ಅತಿದೊಡ್ಡ ಪ್ರಾಣಿ ಎಂದು ಗುರುತಿಸಿಕೊಂಡಿರುವ ತಿಮಿಂಗಿಲದ ಶಬ್ದಗಳನ್ನು ಹೈಡ್ರೋಫೋನ್‌ ನಲ್ಲಿ ಗುರುತಿಸಲಾಗಿದೆ. ನೀಲಿ ತಿಮಿಂಗಿಲ ಅಳಿವಿನಂಚಿನಲ್ಲಿರುವ ಮೀನಿನ ಪ್ರಭೇದವಾಗಿದೆ. ಕೇರಳದ ಕಡಲ ತೀರವು ತಿಮಿಂಗಿಲಗಳ ವಲಸೆಯ ದಾರಿಯಾಗಿದೆಯೇ ಎಂಬುದನ್ನು ತಜ್ಞರು ಪತ್ತೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಸಮುದ್ರದಲ್ಲಿ ತಿಮಿಂಗಿಲಗಳಿರುವ ಕೆಲವು ನಿದರ್ಶನಗಳು ಸಿಕ್ಕಿದ್ದವು. ಮೀನುಗಾರರು ನೀಲಿ ತಿಮಿಂಗಿಲ ಇರುವ ಬಗ್ಗೆ ಖಚಿತ ಪಡಿಸಿದ್ದರು. ಆದರೆ ಕೇರಳ ತೀರಕ್ಕೆ ಹೊಂದಿಕೊಂಡ ಸಮುದ್ರ ಪ್ರದೇಶದಲ್ಲಿ ತಿಮಿಂಗಿಲಗಳಿರುವ ಬಗ್ಗೆ ವೈಜ್ಞಾನಿಕವಾಗಿ ದೃಢವಾಗಿರಲಿಲ್ಲ.

ಕೇರಳ ವಿವಿಯ ಅಕ್ವಾಟಿಕ್‌ ಬಯಾಲಜಿ ಮೀನುಗಾರಿಕಾ ವಿಭಾಗ ಮತ್ತು ಅರೇಬಿಯನ್‌ ಸಮುದ್ರದ ತಿಮಿಂಗಿಲಗಳ ಜಾಲದ ಕುರಿತಾದ ಅಧ್ಯಯನ ತಂಡವು ಜಂಟಿಯಾಗಿ ಮಾರ್ಚ್‌ ತಿಂಗಳಲ್ಲಿ ಸಮುದ್ರದಲ್ಲಿ ಹೈಡ್ರೋಫೋನ್‌ಅನ್ನು ಅಳವಡಿಸಿದ್ದವು. ಜೂನ್‌ ವರೆಗೆ ಸಂಗ್ರಹಿಸಿದ ಶಬ್ದ ತರಂಗಗಳಲ್ಲಿ ನೀಲಿ ತಿಮಿಂಗಿಲ ಸಮುದ್ರದಲ್ಲಿರುವುದು ಪತ್ತೆಯಾಗಿದೆ.

- Advertisement -

Related news

error: Content is protected !!