Sunday, June 28, 2026
spot_imgspot_img
spot_imgspot_img

ಸಾಲದ ವಿಚಾರಕ್ಕೆ ಚಿಕ್ಕಮ್ಮನ ಮಗನ ಬರ್ಬರ ಹತ್ಯೆ!

- Advertisement -
- Advertisement -

ಬೆಂಗಳೂರು: ಸಾಲದ ವಿಚಾರವಾಗಿ ಗಲಾಟೆ ನಡೆದು ಕೊಲೆಯಾಗಿರುವ ಘಟನೆ ಕೆಂಪೇಗೌಡ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿನೋದ್‌ಕುಮಾರ್ (31) ಕೊಲೆಯಾದ ದುರ್ದೈವಿ. ಆರೋಪಿ ಅರುಣ್‌ಕುಮಾರ್ (34) ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಅರುಣ್, ತನ್ನ ಚಿಕ್ಕಮ್ಮನ ಮಗನಾದ ವಿನೋದ್ ಅವರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಿದ್ದನು. ಅವಿವಾಹಿತರಾಗಿದ್ದ ವಿನೋದ್ ಗಾರೆ ಕೆಲಸ ಮಾಡುತ್ತಿದ್ದರು. ಹಲವು ವರ್ಷವಾದರೂ ವಿನೋದ್ ಸಾಲ ವಾಪಸು ಕೊಟ್ಟಿರಲಿಲ್ಲ.

ಸಾಲದ ವಿಚಾರವಾಗಿ ಸೋಮವಾರ ಬೆಳಿಗ್ಗೆ ಇಬ್ಬರ ನಡುವೆ ಜಗಳವಾಗಿತ್ತು. ಆ ಬಳಿಕ ಇಬ್ಬರೂ ಠಾಣೆ ಮೆಟ್ಟಿಲೇರಿದ್ದರು. ಪೊಲೀಸರು ಇಬ್ಬರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಇದರಿಂದಾಗಿ ಸೋಮವಾರ ಮಧ್ಯಾಹ್ನ ಮತ್ತೊಮ್ಮೆ ಮನೆಯ ಬಳಿಯಲ್ಲಿ ಗಲಾಟೆ ನಡೆದಿದೆ. ಈ ವೇಳೆಯಲ್ಲಿ ಆರೋಪಿ ಅರುಣ್, ವಿನೋದ್ ಅವರನ್ನು ಚಾಕುವಿನಿಂದ ಇರಿದು ಕೊಲೆಮಾಡಿದ್ದಾನೆ. ಗಂಭೀರ ಗಾಯಗೊಂಡ ವಿನೋದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!