Tuesday, April 30, 2024
spot_imgspot_img
spot_imgspot_img

ಆಫ್ರಿಕನ್ ವಲಸಿಗರಿದ್ದ ಹಡಗು ಲಿಬಿಯಾದ ಕರಾವಳಿ ತೀರದಲ್ಲಿ ಮುಳುಗಿ ಅಸುನೀಗಿದ 57 ಮಂದಿ

- Advertisement -G L Acharya panikkar
- Advertisement -

ಆಫ್ರಿಕನ್ ವಲಸಿಗರಿದ್ದ ಹಡಗು ಲಿಬಿಯಾದ ಕರಾವಳಿ ತೀರದಲ್ಲಿ ಮುಳುಗಿದ ಪರಿಣಾಮ ಸುಮಾರು 57 ಮಂದಿ ಅಸುನೀಗಿದ ಘಟನೆ ನಡೆದಿದೆ. ಯುರೋಪ್‌ನಲ್ಲಿ ವಲಸಿಗರು ಉತ್ತಮವಾಗಿ ಜೀವನ ನಡೆಸಲು ಪ್ರಯತ್ನಿಸುತ್ತಿರುವ ಮಧ್ಯೆಯೇ, ಮೆಡಿಟೇರಿಯನ್ ಸಮುದ್ರದಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತವಾಗಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ.

ವಲಸಿಗರನ್ನು ಹೊತ್ತಿದ್ದ ಈ ಹಡಗು ಪಶ್ಚಿಮ ಕರಾವಳಿ ಪಟ್ಟಣ ಖುಮ್ಸ್ನಿಂದ ಭಾನುವಾರ ಹೊರಟಿತ್ತು. ಹಡಗಿನಲ್ಲಿ ಮಕ್ಕಳು, ಮಹಿಳೆಯರೆಲ್ಲ ಸೇರಿ ಸುಮಾರು 75 ವಲಸಿಗರು ಇದ್ದರು. ಈಗ 57 ಜನರು ಮೃತಪಟ್ಟಿದ್ದು, ಅದರಲ್ಲಿ 20 ಮಹಿಳೆಯರು, ಇಬ್ಬರು ಮಕ್ಕಳು ಸೇರಿದ್ದಾರೆಂದು ಮೆಸೆಲಿ ಹೇಳಿದ್ದಾರೆ. ಅಲ್ಲದೆ, ಉಳಿದ 18 ಜನರನ್ನು ಮೀನುಗಾರರು ರಕ್ಷಿಸಿದ್ದಾರೆಂದು ಅಂತಾರಾಷ್ಟ್ರೀಯ ವಲಸೆ ಆರ್ಗನೈಸೇಶನ್‌ನ ವಕ್ತಾರೆ ಸಫಾ ಮೆಸೆಲಿ ತಿಳಿಸಿದ್ದಾರೆ.

ಹಡಗು ಮೊದಲು ಇಂಜಿನ್ ಸಮಸ್ಯೆಯಿಂದ ನಿಂತಿತ್ತು. ಆದರೆ ನಂತರ ಕೆಟ್ಟ ಹವಾಮಾನದ ಕಾರಣದಿಂದ ಮುಳುಗಿ ದುರಂತ ಸಂಭವಿಸಿದೆ. ಹೀಗೆ ಪ್ರಾಣಾಪಾಯದಿಂದ ಪಾರಾದವರಲ್ಲಿ ನೈಜೀರಿಯಾ, ಘಾನಾ, ಗಾಂಬಿಯಾದವರು ಇದ್ದಾರೆ ಎಂದು ಹೇಳಲಾಗಿದೆ. ಇದು ಲಿಬಿಯಾ ಕರಾವಳಿ ತೀರದಲ್ಲಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ಹಡಗು ದುರಂತವಾಗಿದೆ. ಕೆಲವೇ ದಿನಗಳ ಹಿಂದೆ ಹಡಗು ಮುಳುಗಿ 20 ವಲಸಿಗರು ಮೃತಪಟ್ಟಿದ್ದರು.

- Advertisement -

Related news

error: Content is protected !!