Wednesday, June 17, 2026
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್‌ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅಭ್ಯರ್ಥಿಗಳ ಘೋಷಣೆ

- Advertisement -
- Advertisement -

ಅಧ್ಯಕ್ಷ ಸ್ಥಾನಕ್ಕೆ ಕರುಣಾಕರ ಉಪಾಧ್ಯಕ್ಷೆ ಸ್ಥಾನಕ್ಕೆ ಸಂಗೀತ ಪಾಣೆ ಮಜಲು ನಾಮ ಪತ್ರ ಸಲ್ಲಿಕೆ

ವಿಟ್ಲ ಪಟ್ಟಣ ಪಂಚಾಯತ್‌‌ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಮೀಸಲಾತಿ ನಿಗದಿಯಾಗಿತ್ತು. ಇದೀಗ 18 ಸ್ಥಾನಗಳ ಪೈಕಿ 12 ಬಿಜೆಪಿ, 5 ಕಾಂಗ್ರೆಸ್‌, 1 ಎಸ್‌ಡಿಪಿಐ. ಇದೀಗ ಬಿಜೆಪಿಯಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿಗಳ ಘೋಷಣೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಕರುಣಾಕರ ಉಪಾಧ್ಯಕ್ಷೆ ಸ್ಥಾನಕ್ಕೆ ಸಂಗೀತ ಪಾಣೆ ಮಜಲುರನ್ನು ಬಿಜೆಪಿ ಚುನಾವಣಾ ಉಸ್ತುವಾರಿ ರವೀಂದ್ರ ಉಳಿದೊಟ್ಟು ಮತ್ತು ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌ ಘೋಷಣೆ ಮಾಡಿದ್ದಾರೆ. ಇಂದು ಚುನಾವಣಾಧಿಕಾರಿ ಬಂಟ್ವಾಳ ತಹಶೀಲ್ದಾರ್ ರವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!