Saturday, June 28, 2025
spot_imgspot_img
spot_imgspot_img

ವಿಟ್ಲ: ಹುಲಿ ವೇಷಧಾರಿ ಕಿಟ್ಟಣ್ಣ ಅವರ ಸಹೋದರ ಗೋವಿಂದ ನಾಯ್ಕ್ ನಿಧನ

- Advertisement -
- Advertisement -

ವಿಟ್ಲ: ನವರಾತ್ರಿ ಉತ್ಸವದ ವೇಳೆ ಕೊರಗ ವೇಷ(ಕೊರಪ್ಪೊಳು) ಧರಿಸುತ್ತಿದ್ದ ವಿಟ್ಲ ಕಸಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಹುಲಿ ವೇಷಧಾರಿ ಕಿಟ್ಟಣ್ಣ ಅವರ ಸಹೋದರ ಗೋವಿಂದ ನಾಯ್ಕ್(80) ಅವರು ಅನಾರೋಗ್ಯದಿಂದ ನಿಧನರಾದರು.

ಇವರು 45 ವರ್ಷದಿಂದ ವಿಟ್ಲ ಶ್ರೀದೇವತಾ ಸಮಿತಿ ವತಿಯಿಂದ ನವರಾತ್ರಿ ಉತ್ಸವದ ಶ್ರೀ ಶಾರದಾ ಮಹೋತ್ಸವದ ಸಂದರ್ಭ ಹುಲಿ ನೃತ್ಯ ದೊಂದಿಗೆ ಕೊರಪ್ಪೊಳು ವೇಷಧಾರಿಯಾಗಿ ನರ್ತಿಸಿ ಜನರಿಗೆ ಮನರಂಜನೆ ನೀಡುತ್ತಿದ್ದರು. ವೇಷಧಾರಿ ಹಾಕಿ ಕುಣಿತದಿಂದ ಬರುವ ಹಣವನ್ನು ದೇವರ ಹುಂಡಿಗೆ ಸಮರ್ಪಣೆ ಮಾಡುತ್ತಿದ್ದರು. ಇವರ ನಿಧನಕ್ಕೆ ವಿಟ್ಲ ದೇವತಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!