Sunday, June 28, 2026
spot_imgspot_img
spot_imgspot_img

ಸರ್ಫ್​ ಎಕ್ಸೆಲ್​ ಕಂಪನಿ ಹೆಸರಿನಲ್ಲಿ ನಡೆಯುತ್ತಿದ್ದ ಮೋಸದ ಜಾಲ ಬಯಲಿಗೆಳೆದ ಪೊಲೀಸರು..!

- Advertisement -
- Advertisement -

ನಕಲಿ ಸರ್ಫ್​ ಎಕ್ಸೆಲ್​​ ಪೌಡರ್​ ತಯಾರಿಸಿ ಮಾರಾಟ ಮಾಡುತ್ತಿದ್ದ ಕಾರ್ಖಾನೆಯ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಖಾನೆ ಮಾಲೀಕ ಮುಖೇಶ್​ ಗರ್ಗ್ ಎಂಬಾತನನ್ನು ಬಂಧಿಸಲಾಗಿದೆ.

ದೇಶದಲ್ಲಿ ಸೋಪಿನ ಪುಡಿ ನಿರ್ಮಾಣದಲ್ಲಿ ಹೆಸರುವಾಸಿಯಾಗಿರುವ ಸರ್ಫ್​ ಎಕ್ಸೆಲ್​ ಕಂಪನಿಯ ಹೆಸರಿನಲ್ಲಿ ನಡೆಯುತ್ತಿರುವ ಮೋಸದ ಬಗ್ಗೆ ಅಸಿಸಡಸ್​​ ಕನ್ಸಲ್ಟಿಂಗ್​ ಇಂಡಿಯಾ ಲಿಮಿಟೆಡ್​​ ಪ್ರತಿನಿಧಿ ರಾಜೇಶ್​ ಕುಮಾರ್​ ಎಂಬವರು ದೂರು ನೀಡಿದ್ದರು. ದೆಹಲಿಯ ಉತ್ತರ ಭಾಗದಲ್ಲಿ ಈ ನಕಲಿ ಸರ್ಫ್ ಎಕ್ಸೆಲ್​ ಪುಡಿ ಮಾರಾಟ ಮಾಡಲಾಗುತ್ತಿತ್ತು.

ದೆಹಲಿಯ ಕುರೇನಿ ಜಿಲ್ಲೆಯ ಗೋದಾಮಿನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೂ ಭಾರೀ ಗಾತ್ರದಲ್ಲಿ ನಕಲಿ ಸೋಪಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!