Wednesday, October 7, 2026
spot_imgspot_img
spot_imgspot_img

ಬೆಳ್ತಂಗಡಿ: ನಾವೂರಿನಲ್ಲಿ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!ಅಪಾರ ಹಾನಿ

- Advertisement -
- Advertisement -

ಬೆಳ್ತಂಗಡಿ : ನಾವೂರು ಗ್ರಾಮದಲ್ಲಿರುವ ಆರೋಗ್ಯ ಕ್ಲಿನಿಕ್‌ಗೆ ಅ.6 ರಂದು ತಡರಾತ್ರಿ ಬೆಂಕಿ ಹಚ್ಚಿ ಅಪಾರ ವಸ್ತುಗಳು ಸುಟ್ಟು ಕರಕಲಾದ ಘಟನೆ ಅ.7 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಅನಾಹುತದದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದುಯಾರೋ ಕಿಡಿಗೇಡಿಗಳು ಕ್ಲಿನಿಕ್ ಹಿಂಭಾಗ ಕಿಟಕಿ ಮೂಲಕ ಒಳಗಡೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ನಾವೂರು ಗ್ರಾಮದ ಶೇಖರ್ ಪೂಜಾರಿ ಎಂಬವರ ಮಾಲೀಕತ್ವದ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ ಎ ಅವರಿಗೆ ಸೇರಿದ ಆರೋಗ್ಯ ಕ್ಲಿನಿಕ್ ಕಾರ್ಯಚರಿಸುತ್ತಿತ್ತು. ಆರೋಗ್ಯ ಕ್ಲಿನಿಕ್‌ನ ಕನ್ನಲೈಂಟ್ ಕೊಠಡಿ ಸೇರಿ ಮೂರು ಕೊಠಡಿಗಳು ಸುಟ್ಟು ಹಾನಿಯಾಗಿದೆ. ಹಾಸಿಗೆ, ಮದ್ದುಗಳು, ಇಲೆಕ್ಟ್ರಾನಿಕ್ ಸೊತ್ತುಗಳು ಬೆಂಕಿ ಅಹುತಿಯಾಗಿ ಅಪಾರ ಹಾನಿ ಸಂಭವಿಸಿದೆ.

ಘಟನ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ದಳ, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ವರದಿಯಲ್ಲಿ ಹೇಳಿವೆ.

- Advertisement -

Related news

error: Content is protected !!