Saturday, July 5, 2025
spot_imgspot_img
spot_imgspot_img

ಎಟಿಎಂ ದರೋಡೆ ಮಾಡಲು ಹೋಗಿ ಮಷಿನ್ ಹಿಂದೆ ಸಿಲುಕಿಕೊಂಡ ಕಳ್ಳ!

- Advertisement -
- Advertisement -

ಚೆನ್ನೈ: ದರೋಡೆಗೆಂದು ಎಟಿಎಂಗೆ ನುಗ್ಗಿದ್ದ ಕಳ್ಳನೊಬ್ಬನಿಗೆ ಎಟಿಎಂ ಮಷಿನ್ ಒಡೆಯಲು ಸಾಧ್ಯವಾಗಿಲ್ಲ. ಆಗ ಗೋಡೆಯ ಬದಿಗೆ ಹೋಗಿ ಎಟಿಎಂ ಮಷಿನ್ ಒಡೆಯುತ್ತಿದ್ದಾಗ ಮಷಿನ್ ಹಾಗೂ ಗೋಡೆಯ ನಡುವೆ ಕಳ್ಳ ಸಿಕ್ಕಿಹಾಕಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ವಿಡಿಯೋ ಸೆರೆಯಾಗಿದೆ.

ಎಟಿಎಂ ದರೋಡೆ ಮಾಡಲು ಬಂದು ಸಿಕ್ಕಿಹಾಕಿಕೊಂಡ ಕಳ್ಳನನ್ನು ಬಿಹಾರ ಮೂಲದ ಉಪೇಂದ್ರ ರಾಯ್(28) ಎನ್ನಲಾಗಿದೆ.

ಕಂಠಪೂರ್ತಿ ಕುಡಿದಿದ್ದ ಉಪೇಂದ್ರ ರಾಯ್​ ಎಟಿಎಂ ಒಡೆದು ದರೋಡೆ ಮಾಡಲು ಹೋಗಿದ್ದ. ಆದರೆ, ಅಲ್ಲಿ ತಾನೇನು ಮಾಡುತ್ತಿದ್ದೇನೆ ಎಂದು ಗೊತ್ತಾಗದಷ್ಟು ಆತ ಅಮಲಿನಲ್ಲಿದ್ದ. ಎಟಿಎಂ ಮಷಿನ್ ಹಿಂದೆ ಹೋಗಿ ನಿಂತ ಕಳ್ಳ ಗೋಡೆಯ ಬಳಿ ಸಿಕ್ಕಿಹಾಕಿಕೊಂಡಿದ್ದಾನೆ.

ಕುಡಿದು ಕೆಳಗೆ ಬೀಳುವಂತಾಗಿದ್ದರಿಂದ ಆತನಿಗೆ ಅಲ್ಲಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಅಲ್ಲಿಂದಲೇ ಎಟಿಎಂ ಒಡೆಯತೊಡಗಿದ ಆತ ಹಣ ದೋಚಲು ಮುಂದಾಗಿದ್ದ. ಆ ಶಬ್ದ ಕೇಳಿದ ಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಎಟಿಎಂ ಸೆಂಟರ್​ನಲ್ಲಿ ಸಿಕ್ಕಿಬಿದ್ದಿದ್ದ ಕಳ್ಳನನ್ನು ಅಲ್ಲಿಂದ ಬಿಡಿಸಿ ವಶಕ್ಕೆ ಪಡೆದು ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

driving
- Advertisement -

Related news

error: Content is protected !!