Saturday, August 29, 2026
spot_imgspot_img
spot_imgspot_img

ಶೇ.100ರಷ್ಟು ಪ್ರೇಕ್ಷಕರಿಗೆ ಚಿತ್ರಮಂದಿರದಲ್ಲಿ ಅವಕಾಶ; ಸಿಎಂ ಬೊಮ್ಮಾಯಿ

- Advertisement -
- Advertisement -

ಬೆಂಗಳೂರು: ಇಂದು ಫಿಲ್ಮ್ ಚೇಂಬರ್​ನವರು ಭೇಟಿಯಾಗಿ ಚಿತ್ರಮಂದಿರದಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮನವಿ ಮಾಡಿದ್ದಾರೆ. ತಜ್ಞರ ಅಭಿಪ್ರಾಯ ಪಡೆದು ನಿರ್ಧರಿಸುವುದಾಗಿ ಹೇಳಿದ್ದೇನೆ. ಶೂಟಿಂಗ್ ವೇಳೆ ಆದ ದುರ್ಘಟನೆಗಳ ಬಗ್ಗೆ ಚರ್ಚಿಸಿದ್ದೇನೆ. ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿನಿಮಾ ಥಿಯೇಟರ್​ನಲ್ಲಿ ಶೇಕಡಾ 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಮನವಿ ಮಾಡಿದ್ದೇವೆ. ಕೊರೊನಾದಿಂದ ಸಿನಿಮಾ ಕ್ಷೇತ್ರ ಭಾರಿ ನಷ್ಟದಲ್ಲಿದೆ. ಈ ನಷ್ಟ ಸರಿದೂಗಬೇಕಾದ್ರೆ ಸಿನಿಮಾ ಥಿಯೇಟರ್ ತೆರೆಯಲು ಅವಕಾಶ ಮಾಡಿಕೊಡಬೇಕು.

ಇವಾಗ ಇರುವ 50ರಷ್ಟನ್ನು ಶೇಕಡಾ 100ರಷ್ಟು ತೆರೆಯಲು ಅವಕಾಶ ಮಾಡಿಕೊಡಬೇಕು. ಹೈ ಬಜೆಟ್ ಸಿನಿಮಾ ಬಂದ್ರೆ ಲೋ ಬಜೆಟ್ ಸಿನಿಮಾ ಗಳಿಗೆ ಅನುಕೂಲ ಆಗುತ್ತದೆ. ಹೀಗಾಗಿ ಸಿನಿಮಾ ಥಿಯೇಟರ್ 100 ರಷ್ಟು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕ ಸಾರಾ ಗೋವಿಂದ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ ಬಳಿಕ ತಿಳಿಸಿದರು.

- Advertisement -

Related news

error: Content is protected !!