Monday, June 30, 2025
spot_imgspot_img
spot_imgspot_img

ನೆಲ್ಯಾಡಿ: ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ; ಲಾರಿ ದುರಸ್ಥಿ ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಸಾವು, ಮತ್ತೋರ್ವ ಗಂಭೀರ

- Advertisement -
- Advertisement -

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿಯಲ್ಲಿ ನಿಂತಿದ್ದ ಲಾರಿಯೊಂದಕ್ಕೆ ಪಿಕಪ್ ಡಿಕ್ಕಿಯಾಗಿ ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಬೆದ್ರೋಡಿ ಬಸ್‌ನಿಲ್ದಾಣದ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದು ಇದರ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಗುದಿದ್ದು ಈ ವೇಳೆ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

- Advertisement -

Related news

error: Content is protected !!