- Advertisement -
- Advertisement -


ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಮುಡಿಗೆ ಚಿನ್ನದ ಪದಕವನ್ನು ಅರ್ಪಿಸಿದ್ದ ನೀರಜ್ ಚೋಪ್ರಾ ಇಂದು ತಮ್ಮ ಪುಟ್ಟ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ವಿಮಾನದಲ್ಲಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಬೇಕೆಂಬ ಆಸೆಯನ್ನು ನೀರಜ್ ಇಂದು ತೀರಿಸಿಕೊಂಡಿದ್ದಾರೆ. 23 ವರ್ಷದ ಜಾವೆಲಿನ್ ಎಸೆತಗಾರ ನೀರಜ್ ಟ್ವಿಟರ್ನಲ್ಲಿ ಈ ಹೃದಯಸ್ಪರ್ಶಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಪೋಷಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎಂಬ ನನ್ನ ಸಣ್ಣ ಕನಸೊಂದು ಇಂದು ನನಸಾಗಿದೆ ಎಂದು ನೀರಜ್ ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ನೀರಜ್ ಚೋಪ್ರಾ ಈ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಕಮೆಂಟ್ಗಳ ಸುರಿಮಳೆಯೇ ಹರಿದಿದೆ.


- Advertisement -