Saturday, April 20, 2024
spot_imgspot_img
spot_imgspot_img

ಚದುರಂಗ ಬೇಧಿಸಿದ ವಿಶ್ವದ ಅತಿ ಕಿರಿಯ ಚೆಸ್ ಗ್ರ‍್ಯಾಂಡ್‌ಮಾಸ್ಟರ್ ಅಭಿಮನ್ಯು

- Advertisement -G L Acharya panikkar
- Advertisement -

ಭಾರತ ಮೂಲದ 12 ವರ್ಷದ ಬಾಲಕ ಅಭಿಮನ್ಯು ಮಿಶ್ರಾ ಚೆಸ್ ಇತಿಹಾಸದ ಅತೀ ಕಿರಿಯ ಗ್ರ‍್ಯಾಂಡ್ ಮಾಸ್ಟರ್ಎಂಬ ದಾಖಲೆ ಬರೆದಿದ್ದಾರೆ.


ಅಮೆರಿಕದ ನ್ಯೂಜರ್ಸಿಯ ಪ್ರತಿಭೆ ಅಭಿಮನ್ಯು ಮಿಶ್ರಾ ವಿಶ್ವದ ಅತಿ ಕಿರಿಯ ಚೆಸ್ ಗ್ರ‍್ಯಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಹಂಗರಿಯ ಬುಡಾಪೆಸ್ಟ್ನಲ್ಲಿ ನಡೆದ ವಝೆರ್‌ಕೆಪ್ಜೊ ಗ್ರ‍್ಯಾಂಡ್‌ಮಾಸ್ಟರ್ಸ್ ಮಿಕ್ಸ್ಡ್ ಚೆಸ್ ಟೂರ್ನಿಯ 9ನೇ ಸುತ್ತಿನ ಆಟ ಗೆಲ್ಲುವ ಮೂಲಕ ಭಾರತೀಯ ಮೂಲದ ಮಿಶ್ರಾ ‘ಅತಿ ಕಿರಿಯ ಜಿ.ಎಂ’ ಎಂಬ ವಿಶ್ವದಾಖಲೆಯ ಒಡೆಯನಾಗಿದ್ದಾನೆ.

ಅಭಿಮನ್ಯು ಮಿಶ್ರಾ 19 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. 2002ರ ಆಗಸ್ಟ್ 12ರಂದು ಕಜಕಿಸ್ತಾನದ ಸರ್ಗೆ ಕರ್ಜಾಕಿನ್ ಅವರು ಅತೀ ಕಿರಿಯ ಗ್ರ‍್ಯಾಂಡ್ ಮಾಸ್ಟರ್ ದಾಖಲೆ ಬರೆದಿದ್ದರು. ಈ ವೇಳೆ ಸರ್ಗೆ ಕರ್ಜಾಕಿನ್ ಗೆ 12 ವರ್ಷ ಏಳು ತಿಂಗಳು ಪ್ರಾಯವಾಗಿತ್ತು. ಆದರೆ ಈ ದಾಖಲೆಯನ್ನು 12 ವರ್ಷ ನಾಲ್ಕು ತಿಂಗಳು ಪ್ರಾಯದ ಅಭಿಮನ್ಯು ಮಿಶ್ರಾ ಮುರಿದಿದ್ದಾರೆ.

ಭಾರತೀಯ ಮೂಲದ ಅಭಿಮನ್ಯು ಮಿಶ್ರಾ ಅಮೆರಿಕದಲ್ಲಿ ಜನಿಸಿದವರು. ಕಳೆದ ಕೆಲವು ತಿಂಗಳಿನಿ0ದ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸತತ ಕೂಟಗಳಲ್ಲಿ ಅಭಿಮನ್ಯು ಮಿಶ್ರಾ ಆಡುತ್ತಿದ್ದಾರೆ.

- Advertisement -

Related news

error: Content is protected !!